ಕುಮಟಾ : ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರಿಗೆ ಸದ್ಗತಿ ಕೋರಿ ಕುಮಟಾದ ಪತ್ರಿಕೆ ಹಾಗೂ ಟಿ.ವಿ. ವರದಿಗಾರರು ಸರಕಾರಿ ಅತಿಥಿ ಗೃಹದಲ್ಲಿ ಶೃದ್ಧಾಂಜಲಿ ಸಭೆಯನ್ನು ನಡೆಸಿ ನುಡಿನಮನ ಸಲ್ಲಿಸಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ದಿ.ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮಾಡಿದರು.

RELATED ARTICLES  ಹೊನ್ನಾವರ ಮಂಡಲದ ವಿವಿಧೆಡೆ ಕಾರ್ಯಕರ್ತರ ಸಭೆ ನಡೆಸಿದ ದಿನಕರ ಶೆಟ್ಟಿ

ಈ ಸಂದರ್ಭದಲ್ಲಿ ಪ್ರವೀಣ ಹೆಗಡೆ, ಎಂ.ಜಿ.ನಾಯ್ಕ, ಅನ್ಸಾರ್ ಶೇಖ್, ಗಣೇಶ ರಾವ್, ಜಿ.ಡಿ.ಶಾನಭಾಗ ಸಂದರ್ಭೋಚಿತ ಮಾತನಾಡಿ ದಿ. ವಾಜಪೇಯಿಯವರ ಬದುಕು ಹಾಗೂ ಸಾಧನೆಗಳನ್ನು ಕೊಂಡಾಡಿದರು. ಸುಬ್ರಾಯ ಭಟ್ ಸ್ವಾಗತಿಸಿದರು. ಚರಣ ನಾಯ್ಕ ವಂದಿಸಿದರು.

ಕುಮಟಾದ ನಾಗರಿಕರಿಂದ ಮೂರುಕಟ್ಟೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬಿಜೆಪಿ ಪ್ರಮುಖರು, ಗಣ್ಯರು, ವಿವಿಧ ಸಂಘಟನೆಗಳ ಪದಾ„ಕಾರಿಗಳು ಸೇರಿದಂತೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ, ನುಡಿ ನಮನ ಸಲ್ಲಿಸಿದರು.
ಸಭೆಯ ಆರಂಭದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ದೀಪ ಬೆಳಗಿ, ಮೌನಾಚರಣೆ ನಡೆಸಿದರು. ಅವರ ಆದರ್ಶ ವಿಚಾರಗಳ ಕುರಿತು ಡಾ.ಜಿ.ಜಿ.ಹೆಗಡೆ ಮಾತನಾಡಿದರು.

RELATED ARTICLES  ಮುಂಡಗೋಡದ ಇಡಗುಂಜಿ ಮಹಾಗಣಪತಿ ದೇವಸ್ಥಾನ ವತಿಯಿಂದ ಸಾಹಿತಿ ಉಮೇಶ ಮುಂಡಳ್ಳಿಯವರಿಗೆ ಸನ್ಮಾನ

ಶಾಸಕ ದಿನಕರ ಶೆಟ್ಟಿ, ಪ್ರಮುಖರಾದ ಎಂ.ಜಿ.ಭಟ್, ಕುಮಾರ ಮಾರ್ಕಾಂಡೆ, ರಾಜೇಶ ಪೈ, ವಿನೋದ ಪ್ರಭು ಮತ್ತಿತರರಿದ್ದರು.