ಭಟ್ಕಳ: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹಂತಕರ ಬಂಧನಕ್ಕೆ ಆಗ್ರಹ
ಭಟ್ಕಳ: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಭಟ್ಕಳ ಹಿಂದೂ ಜಾಗರಣ ವೇದಿಕೆ ಮಂಗಳವಾರ ರಾಜ್ಯಪಾಲರಿಗೆ ಮನವಿಯನ್ನು
ಸಲ್ಲಿಸಲಾಯಿತು.
ರಾಜ್ಯದ ಕಾಂಗ್ರೇಸ್ ಸರ್ಕಾರ ಮುಸ್ಲಿಮ್ ತುಷ್ಟೀಕರಣದ ನೀತಿಯನ್ನು ಅನುಸರಿಸುತ್ತಿದ್ದು ದ.ಕ ಜಿಲ್ಲೆಯನ್ನು ಇನ್ನೊಂದು ಕೇರಳವನ್ನಾಗಿ ಮಾಡಲು ಹೊರಟಿದೆ ಎಂದು ಮನವಿಯಲ್ಲಿ ಆರೋಪಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹಿಂದೂ ವಿರೋಧಿ ಹೇಳಿಕೆಗಳಿಂದ ಮುಸ್ಲಿಮ್ ಮೂಲಭೂತವಾದಿ ಸಂಘಟನೆಗಳಿಗೆ ಬಲ ಬರುತ್ತಿದೆ, ಜಿಲ್ಲೆಯಲ್ಲಿ ನಿರಂತವಾಗಿ ನಡೆಯುತ್ತಿರುವ ಗಲಭೆಗಳಿಗೆ ಸರ್ಕಾರದ ಪ್ರಾಯೋಜಕತ್ವವಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾಕರ ಮತಗಳನ್ನು ಸಳೆಯಲು ಪೊಲೀಸರ ಮೂಲಕ ಹಿಂದೂ ಮುಖಂಡರನ್ನು ಗುರಿಯಾಗಿಸಿತ್ತಿರುವದನ್ನು ಹಿಂಜಾವೇ ತೀವ್ರವಾಗಿ ಖಂಡಿಸುತ್ತದೆ ಹಿಂದೂಗಳ ದಮನ ನೀತಿಯನ್ನು ನಿಲ್ಲಿಸದಿದ್ದರೆ ರಾಜ್ಯದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದೆ.
ಮನವಿಯನ್ನು ತಹಸೀಲ್ದಾರ್ ವಿ.ಎನ್.ಬಾಡಕರ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಈಶ್ವರ ನಾಯ್ಕ
ಸುನಿಲ್ ನಾಯ್ಕ ರಾಘವೇಂದ್ರ ನಾಯ್ಕ.ದಿನೇಶ್ ಮೊಗೇರ.
ಶ್ರೀನಿವಾಸ ನಾಯ್ಕ .ದತ್ತು ನಾಯ್ಕ
ಸೇರಿದಂತೆ ಹಲವು ಹಿಂಜಾವೇ ಕಾರ್ಯಕರ್ತರು ಉಪಸ್ಥಿತರಿದ್ದರು.