ಕಾರವಾರ: ರೋಟರಿ ಕ್ಲಬ್’ನ ಅಂಕೋಲಾ ಗ್ರಾಮೀಣ ಘಟಕ ಹಾಗೂ ಆರ್.ಎನ್.ನಾಯಕ ಪ್ರತಿಷ್ಠಾನದಿಂದ ಸ್ವಚ್ಛ ಭಾರತ ಜನಜಾಗೃತಿಗಾಗಿ ರೋಟರಿ ಮ್ಯಾರಾಥಾನ್ ಓಟವನ್ನು ಪ್ರಾರಂಭಿಸಲಾಗಿದೆ.ಸುಮಾರು 750 ಸ್ಪರ್ಧಿಗಳು ಭಾಗವಹಿಸಿದ್ದು ಉತ್ಸುಕತೆಯ ಓಟ ಪ್ರಾರಂಭಿಸಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಮತ್ತು ಜನಜಾಗೃತಿ ಮೂಡಿಸಲು ಸುಮಾರು 10 ಕಿ.ಮೀ. ‘ರೋಟರಿ ಮ್ಯಾರಾಥಾನ್ ಓಟ’ವನ್ನು ಹಮ್ಮಿಕೊಳ್ಳಲಾಗಿದೆ.

RELATED ARTICLES  ಮಾದರೀ ಕಾರ್ಯಕ್ಕೆ ಮುಂದಾದ ಪ್ರಮೋದ ಹೆಗಡೆ

ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಬೇಲೇಕೇರಿ ಕ್ರಾಸ್’ನಿಂದ ಬೇಲೇಕೇರಿ- ಭಾವಿಕೇರಿ- ಬಡಗೇರಿ- ಕೇಣಿ- ಬಂಡಿಬಝಾರ ಮುಖ್ಯ ರಸ್ತೆ- ಗ್ರಂಥಾಲಯದ ಮುಂದುಗಡೆಯ ರಸ್ತೆ- ಪೊಲೀಸ್ ಸ್ಟೇಶನ್ ಸರ್ಕಲ್ ಮೂಲಕ ಸಾಗಿ ಬರುವ ಈ ಮ್ಯಾರಥಾನ್ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.

ಮಹಿಳೆಯರ ವಿಭಾಗದಲ್ಲಿ ಯಾವುದೇ ವಯೋಮಿತಿ ಇಲ್ಲದ ಏಕಸ್ಪರ್ಧೆ ಹಾಗೂ ಪುರುಷರ ವಿಭಾಗದಲ್ಲಿ 35 ವರ್ಷ ಒಳಗಿನವರ ವಿಭಾಗ ಹಾಗೂ 35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

RELATED ARTICLES  ಕೊರೋನಾ ಇನ್ನಷ್ಟು ಸಡಿಲವಾಯ್ತು ನಿಯಮ : ರದ್ದಾಯ್ತು ನೈಟ್ ಕರ್ಫ್ಯೂ : ಶಾಲೆಗಳ ಪುನರಾರಂಭ.

ಮ್ಯಾರಥಾನ್ ನಲ್ಲಿ ವಿಜೇತರಾಗುವವರಿಗೆ ಪ್ರತಿ ವಿಭಾಗಕ್ಕೂ ಸಮಾನ ನಗದು ಬಹುಮಾನ ನೀಡಲಾಗುತ್ತಿದೆ. ಪ್ರಥಮ ರೂ.15 ಸಾವಿರ, ದ್ವಿತೀಯ ರೂ.7,500, ತೃತೀಯ ರೂ.4 ಸಾವಿರ ಹಾಗೂ ಸಮಾಧಾನಕರ ಬಹುಮಾನ ರೂ.2 ಸಾವಿರ ನಗದು ಹಾಗೂ ಪ್ರಶಸ್ತಿ ಟ್ರೋಫಿಯನ್ನು ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿ ನೀಡಲಾಗುತ್ತದೆ.