ಬಹುತೇಕ ಮಂದಿಗೆ ಹಿಮ್ಮಡಿ ಒಡೆದಿರುವುದು ದೊಡ್ಡ ಸಮಸ್ಯೆಯಾಗಿದೆ. ಮಾರ್ಕೆಟ್ ನಲ್ಲಿ ಸಿಗುವ ಹತ್ತಾರು ಕ್ರೀಮ್ ಗಳನ್ನು ಬಳಸಿದರು ಹಿಮ್ಮಡಿ ಒಡೆಯುವುದು ಮಾತ್ರ ತಪ್ಪುವುದೇ ಇಲ್ಲ.

ಒಡೆದ ಹಿಮ್ಮಡಿಯಿಂದ ಪಾದ ಪ್ರದರ್ಶಿಸಲಾಗದೆ ಮುಚ್ಚಿಕೊಂಡೇ ತಿರುಗಬೇಕಾಗುವುದು ಒಂದು ಕಡೆಯಾದರೆ ತಮಗಿಷ್ಟ ಬಂದಂತಹ ಚಪ್ಪಲಿ ಧರಿಸಲು ಸಾಧ್ಯವಾಗುವುದಿಲ್ಲವಲ್ಲ ಎಂಬ ಚಿಂತೆ ಮತ್ತೊಂದು ಕಡೆ.

RELATED ARTICLES  ಸರ್ವಿಕಲ್ ಕ್ಯಾನ್ಸರ್ ಗೆ ಲಸಿಕೆ ; ಇಂದು ಬಿಡುಗಡೆ

ಇಷ್ಟೊಂದು ತೊಂದರೆ ಆಗುತ್ತಿರುವ ಒಡೆದ ಹಿಮ್ಮಡಿಯಿಂದ ರಕ್ಷಿಸಿಕೊಳ್ಳಲು ಈ ಸುಲಭ ವಿಧಾನಗಳನ್ನು ಅನುಸರಿಸಿ ನೋಡಿ. ಮೊದಲಿಗೆ ಚಪ್ಪಲಿ ಧರಿಸದೇ ತಿರುಗಾಡಬೇಡಿ. ಮನೆ ಒಳಗಿರಲಿ ಅಥವಾ ಹೊರಗಿರಲಿ ಚಪ್ಪಲಿ ಹಾಕಿಕೊಂಡೇ ತಿರುಗಾಡಿ.

ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿಕೊಂಡು ಒಡೆದ ಭಾಗಗಕ್ಕೆ ಹಚ್ಚಿಕೊಳ್ಳುವುದರಿಂದ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಉಪ್ಪು ಮತ್ತು ನಿಂಬೆ ಬೆರಿಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಪಾದವನ್ನು ಇಡುವುದರಿಂದ ಹಿಮ್ಮಡಿ ಒಡೆಯುವುದು ತಡೆಯಬಹುದಾಗಿದೆ.

RELATED ARTICLES  ಟೊಮೆಟೊದಿಂದ ಮುಖದ ಸೌಂದರ್ಯವನ್ನು ಹೀಗೆ ಹೆಚ್ಚಿಸಿ...

ಆದಷ್ಟು ಹೆಚ್ಚಿಗೆ ನೀರನ್ನು ಕುಡಿಯಿರಿ, ಪಾದಗಳ ಮಸಾಜ್ ಮಾಡುವುದರಿಂದ ಹಿಮ್ಮಡಿ ಒಡೆಯುವುದರಿಂದ ಪಾರಾಗಬಹುದಾಗಿದೆ.