ಭಾರತದಲ್ಲಿ ಹಲವಾರು ಐಷಾರಾಮಿ ಆಹಾರ ಪದಾರ್ಥಗಳು ಬೆಳೆಯಲಾಗುತ್ತದೆ. ಹೆಚ್ಚಿನವರಿಗೆ ಇದರ ಮಾಹಿತಿವಿರುವುದಿಲ್ಲ. ಕೇಸರಿ, ಡಾರ್ಜಿಲಿಂಗ್ ಚಹಾ ಸೇರಿದಂತೆ ಭಾರೀ ಬೆಲೆ ಬಾಳುವ ಮತ್ತು ವಿಶೇಷ ಉತ್ಪನ್ನಗಳು ನಮ್ಮಲ್ಲಿ ಬೆಳೆಯಲಾಗುತ್ತದೆ.
ಇದೇ ರೀತಿ ಇನ್ನೊಂದು ಉತ್ಪನ್ನ ನಮ್ಮ ದೇಶದಲ್ಲಿ ಕಂಡು ಬರುತ್ತದೆ. ಇದರ ಬೆಲೆ ಕೆಜಿಗೆ ಬರೊಬ್ಬರಿ 30000 ರುಪಾಯಿಗಳು !
ಇದನ್ನು ‘ಗುಸ್ಸಿ ಅಣಬೆ’ ಎಂದು ಕರೆಯುತ್ತಾರೆ. ಹಿಮಾಲಯದ ತಪ್ಪಲಲ್ಲಿ ಮಾತ್ರ ಇದು ಕಂಡುಬರುತ್ತದೆ. ವಿಶ್ವದಾಂದ್ಯಂತ ರಾಜಮನೆತನ ಮತ್ತು ಐಷಾರಾಮಿ ಜೀವನ ನಡೆಸುವವರು ಇದಕ್ಕೆ ಭಾರೀ ಬೆಲೆ ನೀಡಿ ಖರೀದಿಸುತ್ತಾರೆ.
ಸಿಡಿಲು ಮತ್ತು ಮಿಂಚು ಬಂದಾಗ ಇದು ಕಂಡುಬರುತ್ತದೆ ಎಂಬ ಕಾಶ್ಮೀರದ ಹಳ್ಳಿಯ ಜನರು ನಂಬುತ್ತಾರೆ .
‘ಗುಸ್ಸಿ ಅಣಬೆ’ ಯ ಹೆಸರಲ್ಲಿ ಕೆಲವರು ನಕಲಿ ಅಣಬೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಕಂಡುಬಂದಿತ್ತು. ಕಳಪೆ ಗುಣಮಟ್ಟದ ಗುಸ್ಸಿ ಅಣಬೆಗಳು ಕಡಿಮೆಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.