ಕುಮಟಾ : ಕಷ್ಟ ಎಂದವರಿಗೆ ಸಹಾಯ ಮಾಡೋದ್ರಲ್ಲಿ ಕುಮಟಾ ಜನತೆ ಸದಾ ಮುಂದೆ.. ಹೌದು ಒಂದು ಕರೆಗೆ ಸಹಾಯಕ್ಕೆ ಬರೋರು ಅನೇಕರು ಇಲ್ಲಿದ್ದಾರೆ. ಮಳೆಯ ರೌದ್ರ ನರ್ತನಕ್ಕೆ ಕೊಡಗಿನಲ್ಲಿ ಸಂಪೂರ್ಣ ಜಲಪ್ರಳಯವಾಗಿದೆ. ಅಲ್ಲಿನ ಜನ ನಲುಗಿ ಹೋಗಿದ್ದು ಕುಡಿಯಲು ನೀರಿಲ್ಲದೆ. ಊಟಕ್ಕೂ ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಅಲ್ಲಿನ ಜನತೆಯ ನೆರವಿಗೆ ಬಿಟಿವಿ ನ್ಯೂಸ್ ಮುಂದಾಗಿತ್ತು. ಅದರ ಜೊತೆಗೆ ಕೈ ಜೋಡಿಸಿದ ಕುಮಟಾ ಜನತೆ ಮಾನವೀಯತೆ ಮೆರೆದರು.
ಮೊದಲಾಗಿ ಬಿಟಿವಿ ಈ ಅಭಿಯಾನಕ್ಕೆ ಕುಮಟದ ರಕ್ತ ನೀಡಿ ಜೀವ ಉಳಿಸಿ ವಾಟ್ಸಾಪ್ ಗ್ರೂಪ್ ಕೈ ಜೊಡಿಸಿದೆ..ಕುಮಟ ಪಟ್ಟಣ್ಣದಲ್ಲಿ ಸಂಚರಿಸಿದ ಬಿಟಿವಿ ನೆರವಿನ ಹಸ್ತ ಅಭಿಯಾಕ್ಕೆ ಪಟ್ಟಣದ ಜನ ಸ್ವ ಖುಷಿಯಿಂದ ಅಕ್ಕಿ,ಸಕ್ಕರೆ, ಬ್ರೇಡ್,ಬಟ್ಟೆ, ಪಾತ್ರೆ,ಚಾಪೆ ಸೇರಿದಂತೆ ಅಗತ್ಯ ವಸ್ತುವನ್ನು ನೀಡುವ ಮೂಲಕ ಸಂಸ್ತ್ರರ ನೆರವಿಗೆ ಸಹರಿಸಿದರು.ಕುಮಟ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು, ಕುಮಟ ಪುರಸಭೆಯ ಅಧಿಕಾರಿಗಳು, ಹಾಗೂ ಪಟ್ಟಣದ ಎಲ್ಲಾ ಅಂಗಡಿಕಾರರು ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ರಕ್ತನೀಡಿ ಜೀವ ಉಳಿಸಿ ವಾಟ್ಸಾಪ್ ಗ್ರೂಪ್ ನ ಸರ್ವ ಸದಸ್ಯರು, ಕುಮಟಾದ ಯುವ ಬ್ರೀಗೆಡ್ ಸದಸ್ಯರು ಪಾಲ್ಗೊಂಡಿದ್ದರು ಸುರಿವ ಮಳೆ ಹಾಗೂ ಇನ್ನಾವುದೇ ತೊಡಕುಗಳನ್ನು ಲೆಕ್ಕಿಸದೇ ನೋವಿಗೆ ಸ್ಪಂದಿಸಿದ ರೀತಿ ಮಾತ್ರ ಅನನ್ಯ ಅಂತಿದ್ದಾರೆ ಎಲ್ಲರೂ.