ಕಾರವಾರ: ನಾಯಿ ಪ್ರಾಣಿಗಳನ್ನು ಕೊಂದು ತಂದ ವರದಿಗಳೇ ನಮಗೆ ಘೋರವಾಗಿ ಕಾಣುತ್ತವೆ, ಕೆಲ ಕಡೆ ನಾಯಿಗಳು ಬಾಲಕರ ಮೇಲೆ ಎರಗಿದ ಘಟನೆಗಳು ದೂರ ದೂರುಗಳಿಂದ ವರದಿಯಾಗಿತ್ತು! ಆದರೆ ಇದು ಉತ್ತರ ಕನ್ನಡ ತಲ್ಲಣವಾಗುವ ಘಟನೆ ವರದಿಯಾಗಿದೆ. ಇದುವೆ ನಾಯಿಯ ಬಾಯಿಗೆ ಬಲಿಯಾದ ವ್ಯಕ್ತಿಯ ವರದಿ.
ನಾಯಿ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಕಾರವಾರ ನಗರದ ನಂದನಗದ್ದಾದಲ್ಲಿ ನಡೆದಿದೆ. ನಾಯಿ ಕಚ್ಚಿ ವ್ಯಕ್ತಿಯ ದೇಹದ ಕೆಲಭಾಗ ಹೊರ ಬಂದಿದ್ದು ನೋಡಿದ ಜನತೆ ಭಯಭೀತರಾದ ಘಟನೆ ನಡೆದಿದೆ.
ದೀಪಕ (ಶಾಣೆ) ನಾಯ್ಕ (30) ಮೃತ ದುರ್ದೈವಿ. ನಂದನಗದ್ದಾದ ಸ್ಮಾಶನದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿತ್ತು. ರಾತ್ರಿಯ ವೇಳೆ ಇಲ್ಲಿ ಸುತ್ತಮುತ್ತ ತಿರುಗಾಡುವವರನ್ನು ನಾಯಿಗಳು ಬೆನ್ನಟ್ಟುತ್ತಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ ದೀಪಕ್ ಸ್ಮಶಾನದಲ್ಲಿ ಶೌಚಕ್ಕೆ ತೆರಳಿದ್ದ ವೇಳೆ ನಾಯಿಗಳು ಗುಂಪಾಗಿ ದಾಳಿ ಮಾಡಿವೆ. ಇದರಿಂದಾಗಿ ದೀಪಕ್, ಸೈಕಲ್ ಅನ್ನು ಸ್ಮಶಾನದಲ್ಲೇ ಬಿಟ್ಟು ತಪ್ಪಿಸಿಕೊಳ್ಳಲು ಓಡಿದ್ದಾನೆ. ಆದರೆ, ನಾಯಿಗಳು ಆತನ ಪ್ರಾಣವನ್ನೇ ಬಲಿಪಡೆದುಕೊಂಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅನೇಕ ಉಹಾಪೋಹಗಳೂ ಇರಬಹುದೇ ಎಂಬ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ.
ನಾಯಿಗಳ ಗುಂಪು ದಾಳಿ ನಡೆಸಿದ್ದು ತಲೆ ,ಕುತ್ತಿಗೆ ಬಾಗ ಕಚ್ಚಿ ಗಾಯಗೊಳಿಸಿವೆ ಎನ್ನಲಾಗಿದೆ .ನಂತರ ಈತನ ಹೊಟ್ಟೆಯ ಕರಳನ್ನು ಕಿತ್ತು ತಿಂದಿದ್ದು ಸ್ಥಳದಲ್ಲೇ ಸಾವುಕಂಡಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತ ದೀಪಕ್ ಸಮಾರಂಭಗಳಿಗೆ ಹೂವುಗಳ ಅಲಂಕಾರ ಮಾಡುವ ಕೆಲಸ ಮಾಡುತಿದ್ದಾನೆ.ಆದ್ರೆ ಇಂದು ನಂದನಗದ್ದ ದಲ್ಲಿ ದೊರತ ದೇಹದ ಬಹುತೇಕ ಭಾಗಗಳು ನಾಯಿಗಳು ಕಚ್ವಿರುವ ಗಾಯಗಳಿವೆ.ಇದನ್ನು ಹೊರತುಪಡಿಸಿದರೇ ಬೇರೆ ಘಾಯಗಳು ಅಥವಾ ಹಲ್ಲೆ ಮಾಡಿ ಕೊಲೆ ಮಾಡಿದ ಯಾವ ಕುರುಹುಗಳು ದೊರೆತಿಲ್ಲ ಹೀಗಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಈ ಪ್ರಕರಣದ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆಯ ನಂತರ ಪೂರ್ಣ ಮಾಹಿತಿ ಹೊರ ಬರಬೇಕಿದೆ. ಆದರೆ ಘಟನೆಯಿಂದ ಉತ್ತರ ಕನ್ನಡದ ಜನ ಭಯಭೀತರಾಗಿದ್ದು ಎಂತಹ ಘಟನೆ ಎಂದು ಮಾತಾಡಿಕೊಳ್ಳುವುದು ಸಾಮಾನ್ಯವಾಗಿದೆ.