ಕುಮಟಾ: ಇಲ್ಲಿಯ ಪುರಸಭಾ ವ್ಯಾಪ್ತಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಉಪನಿರ್ದೇಶಕರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ಸದ್ಭಾವನಾ ದಿನವನ್ನು ಆಚರಿಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕ ಪ್ರದೀಪ ನಾಯ್ಕ ಎಲ್ಲ ಧರ್ಮ, ಭಾಷೆ ಹಾಗೂ ವಿವಿಧ ಪರಿಸರದಿಂದ ಬಂದ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರದಿಂದ ದೂರ ಇರಬೇಕಾದ ಅಗತ್ಯತೆಯ ಕುರಿತು ಮಾತನಾಡಿದರು.

RELATED ARTICLES  ಹೊನ್ನಾವರದಲ್ಲಿ ಓರ್ವನಿಗೆ ಕೊರೋನಾ ದೃಢ : ಏರಿದ ಸೋಂಕಿತರ ಸಂಖ್ಯೆ

ಸಂವಿಧಾನದ 42ನೇ ತಿದ್ದುಪಡಿ ಮೂಲಕ ಜತ್ಯಾತೀತತೆ ಪದವನ್ನು ಸೇರಿಸಲಾಗಿತ್ತು. ಆದರೆ, ಭಾರತದ ಜನರು ಆಚರಣೆ ಹಾಗೂ ಪದ್ಧತಿ ಮತ್ತು ಪರಂಪರೆಯಲ್ಲಿ ಜಾತ್ಯಾತೀತ ಎಂಬ ಅಂಶವನ್ನು ಈ ಮೊದಲೇ ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ ಎಂದು ನುಡಿದರು.

ಕೇವಲ ಕಾಟಾಚಾರಕ್ಕಾಗಿ ಸದ್ಭಾವನಾ ದಿನಾಚರಣೆಯನ್ನು ಆಚರಿಸದೆ. ನಾವು ಮಾಡುವ ಕೆಲಸದಲ್ಲಿ ಯಾವುದೇ ಜಾತಿ, ಧರ್ಮ, ಮತ ಎಂಬ ಬೇಧಭಾವ ಇಲ್ಲದೆ ಸೌಹಾರ್ದ್ ಮತ್ತು ಭಾವ್ಯಕ್ಯ ದಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

RELATED ARTICLES  ಗೋದಿನ- ಗೋವಿಗಾಗಿ ಆಲೆಮನೆ ಕಾರ್ಯಕ್ರಮ

ಈ ಸಂದರ್ಭದಲ್ಲಿ ಅವರು ಸದ್ಭಾವನೆಯ ಪ್ರತಿಜ್ಞೆಯನ್ನು ಬೋಧಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು, ಹಿರಿಯ ಶಿಕ್ಷಕರಾದ ಎಲ್.ಎನ್.ಅಂಬಿಗ, ವಿ.ಎನ್.ಭಟ್ಟ, ಸುರೇಶ ಪೈ ವೇದಿಕೆಯಲ್ಲಿದ್ದರು.