ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಂಗಸಂಸ್ಥೆಗಳ ಆಶ್ರಯದಲ್ಲಿ ವಿನಯಸ್ಮøತಿ ಹಾಗೂ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮಗಳನ್ನು ಆಚರಿಸಲಾಯಿತು.
ಗಿಬ್ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿ ದಿ. ವಿನಯಾ ಶಾನಭಾಗರವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುವ ‘ವಿನಯಸ್ಮøತಿ ಸಮರ್ಥ ಶಿಕ್ಷಕ ಪುರಸ್ಕಾರ’ವನ್ನು ಸಂತೆಗುಳಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಸಾಧನಾ ಪೈ ಇವರಿಗೆ ನೀಡಿ ಪುರಸ್ಕರಿಸಲಾಯಿತು. ನಂತರ ಅವರು ಮಾತನಾಡಿ, “ತಮಗೆ ಬಂದಿರುವ ಈ ಪ್ರಶಸ್ತಿ ಪ್ರಸಾದವೆಂದು ಸಂಬೋಧಿಸಿದರಲ್ಲದೆ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಯಶಸ್ಸಿನೆಡೆಗೆ ಸಾಗಬೇಕು” ಎಂದರು.

RELATED ARTICLES  ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆಯಲಿರುವ ಉದ್ಯೋಗ ಕಡಿತ, ತೂಗುಗತ್ತಿ ಕೆಳಗೆ 90,000 ಉದ್ಯೋಗಗಳು!

ಕಾರ್ಯಕ್ರಮದÀ ಉದ್ಘಾಟಕರಾಗಿ ಉಪಸ್ಥಿತರಿದ್ದ ಶ್ರೀಯುತ ಎಸ್. ಜೆ. ಕೈರನ್, ನಿವೃತ್ತ ಉಪಾಧ್ಯಾಪಕರು, ಹೊನ್ನಾವರ ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹೆಚ್ಚಿನ ಮಾಕ್ರ್ಸ್ ಬರದಿದ್ದರೂ, ರಿಮಾಕ್ರ್ಸ್ ಬರದ ಹಾಗೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಕ್ಷಕನಾದವನು ವಿದ್ಯಾರ್ಥಿಗಳಿಗೆ ಅರ್ಚಕನಂತಿರಬೇಕು, ಅಂದಾಗ ಮಾತ್ರ ವಿದ್ಯಾರ್ಥಿಗಳು ಮೌಲ್ಯಯುತ, ಸಂಸ್ಕøತಿಯುತರಾಗಲು ಸಾಧ್ಯ” ಎಂದು ನುಡಿದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ಸುಮಿತ್ರಾ ಕೌಶಿಕ್, ಸಮಾಜ ಸೇವಕಿಯರು, ಮಂಕಿ, ಹೊನ್ನಾವರ ಮಾತನಾಡಿ, ಕೊಂಕಣಿ ಭಾಷೆಯ ಮೂಲ ಹಾಗೂ ಭಾಷೆಯಲ್ಲಿನ ಸ್ಥಳಬೇಧÀ, ಭಾಷಾ ಪ್ರೇಮದ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿಠ್ಠಲ್ ಆರ್. ನಾಯಕ ವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರುಗಳಾದÀ ಶಿವಾನಂದ ಭಟ್ಟ ಅತಿಥಿಗಳನ್ನು ಹಾಗೂ ಚಿದಾನಂದ ಭಂಡಾರಿ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಶುಭಾರಂಭ

ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ರಮೇಶ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಡಾರಿ, ಮುಖ್ಯಾಧ್ಯಾಪಕಿಯರಾದ ಶ್ರೀಮತಿ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ|| ಸುಲೋಚನಾ ರಾವ್ ವಂದಿಸಿದರು, ಶಿಕ್ಷಕರಾದ ಪ್ರಕಾಶ ಗಾವಡಿ ಹಾಗೂ ವಿನಯಾ ನಾಯಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.