ಹೊನ್ನಾವರ: ತಾಲೂಕಿನ ತಾಳಮಕ್ಕಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಕತ್ತಿಯಿಂದ ಹೊಡೆದು ವ್ಯಕ್ತಿಯ ಕೊಲೆ ನಡೆದ ಘಟನೆ ವರದಿಯಾಗಿದೆ.
ಆಸ್ತಿ ವಿಚಾರ ಹಿನ್ನಲೆಯಲ್ಲಿ ದಾಯಾದಿಗಳಲ್ಲಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ ಇದೀಗ ಆ ಕಲಹವೇ ಕೊಲೆ ಮಾಡುವ ಮಟ್ಟಕ್ಕೆ ಬಿಗಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ಘಟನೆಯಲ್ಲಿ ಮಹಾಬಲೇಶ್ವರ ಹಾಲಪ್ಪ ನಾಯ್ಕ(೬೭) ಕೊಲೆಯಾದ ವ್ಯಕ್ತಿ ಎಂದು ಗುರ್ತಿಸಲಾಗಿದ್ದು ಆತನ ದಾಯಾದಿ ಉಮೇಶ ಲಕ್ಷ್ಮಣ ನಾಯ್ಕ ಕೊಲೆಮಾಡಿದ್ದಾನೆ ಎಂಬ ಆರೋಪ ಬಂದಿದೆ.
ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ತನಿಖೆಯ ನಂತರದಲ್ಲಿ ಘಟನೆಗಳ ಸಂಪೂರ್ಣ ಚಿತ್ರಣ ಸಿಗಲಿದ್ದು ಜನತೆಯ ಮಾಹಿತಿಯನ್ನು ದಾಖಲಿಸಿ ವರದಿ ಮಾಡಲಾಗಿದೆ.