ಕುಮಟಾ: ಪ್ರವಾಹದ ಭೀಕರತೆಗೆ ಕೊಡಗು ಕದಡಿ ಹೋಗಿದೆ. ಆದರೆ ಕೊಡಗಿನ ಜನತೆಗೆ ಅನೇಕರು ನೆರವಾಗಿದ್ದಾರೆ.ಇದೀಗ ಕುಮಟಾ ಪುರಸಭೆಯ ಅಧಿಕಾರಿಗಳೂ ವಿಶೇಷವಾಗಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಪ್ರವಾಹ ಸಂತ್ರಸ್ತ ಕೊಡಗು ಜಿಲ್ಲೆಯ ಜನತೆಗಾಗಿ ಇಲ್ಲಿನ ಪುರಸಭೆಯ ಅಧಿಕಾರಿ, ಸಿಬ್ಬಂದಿ ವರ್ಗ ನೆರವು ನೀಡಲು ಮುಂದಾಗಿ
ಹೊರಗುತ್ತಿಗೆ ಪೌರಕಾರ್ಮಿಕರು, ಹೊರ ಗುತ್ತಿಗೆ ನೌಕರರು, ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು 80 ಮಂದಿ ತಮ್ಮ ಒಂದು ದಿನದ ವೇತನವನ್ನು ಅವರಿಗೆ ನೀಡಲು ತೀರ್ಮಾನಿಸಿದ್ದಾರೆ. ಅದರಂತೆ ಒಟ್ಟು 58,350 ರೂ.ಗಳನ್ನು ನೆರವಾಗಿ ಕೊಡಗಿಗೆ ಪುರಸಭೆಯಿಂದ ಹಸ್ತಾಂತರ ಮಾಡಲಾಗುತ್ತಿರುವುದೇ ವಿಶೇಷ
ಈ ಕಾರ್ಯದಿಂದಾಗಿ ಕೊಡಗಿನ ಜನತೆಗೆ ಮಾನಸಿಕ ಸ್ಥೈರ್ಯ ತುಂಬುವುದರ ಜತೆಗೆ ಆರ್ಥಿಕ ಕ್ರೋಢಿಕರಣ ಕೂಡ ತುಂಬ ಮುಖ್ಯವಾಗಿದೆ, ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳ ಒಂದು ದಿನದ ವೇತನವನ್ನು ಅವರಿಗೆ ನೆರವಾಗಿ ನೀಡಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಾಧಿಕಾರಿ ಸುರೇಶ್ ಎಂ.ಕೆ ತಿಳಿಸಿದ್ದಾರೆ.
ಸದರಿ ಹಣವನ್ನು ಜಿಲ್ಲಾಧಿಕಾರಿ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪುರಸಭೆಯ ಪ್ರಕಟಣೆ ತಿಳಿಸಿದೆ.