ಶಿರಸಿ: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಘನಾಶಿನಿ ನದಿ ಮೂಲವಾದ ಶಂಕರತೀರ್ಥದ ತಡೆ ಗೋಡೆ ಕುಸಿತಕ್ಕೊಳಗಾಗಿದೆ.

ತಡೆ ಗೋಡೆ ಕುಸಿತದಿಂದಾಗಿ ಶಂಕರತೀರ್ಥ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿದೆ. ಕೆರೆಯ ಒಂದು ಬದಿಯ ತಡೆ ಗೋಡೆ ಬಹುತೇಕ ಕುಸಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಂಕರತೀರ್ಥದ ಪ್ರವೇಶ ನಿರ್ಭಂಧಿಸಲಾಗಿದೆ ಎಂದು ವರದಿಯಾಗಿದೆ. ಇದರ ಜೊತೆ ಬೀದಿ ದೀಪದ ಕಂಬ ಕೂಡ ನೆಲಕ್ಕುರುಳಿದೆ. ಕೆರೆ ಸುತ್ತ ಇನ್ನೂ ಹಲವೆಡೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬೀಳುವ ಅಪಾಯದಲ್ಲಿದೆ ಹೀಗಾಗಿ ಈ ಜಾಗದಲ್ಲಿ ಓಡಾಟ ನಿಷೇಧಿಸಲಾಗಿದೆ ಎನ್ನಲಾಗಿದೆ.

RELATED ARTICLES  ಕರೋನಾ ಹಿನ್ನೆಲೆ ನಡೆಯಲ್ಲ ಬಾಡದ ಜಾತ್ರೆ

ಶಿರಸಿ ಜೀವ ಜಲಪಡೆಯವರು ಇತ್ತೀಚೆಗೆ ಶಂಕರತೀರ್ಥದ ಸಮಗ್ರ ಅಭಿವೃದ್ಧಿಯ ಯೋಜನೆ ಕೈಗೊಂಡು ಕಾರ್ಯಾಚರಣೆ ನಡೆಸಿದ್ದರು‌. ಆದರೆ ಅತಿಯಾದ ಮಳೆಯ ಕಾರಣ ತಡೆಗೋಡೆ ಕುಸಿದು ಕೆರೆ ಸೇರಿದೆ.

RELATED ARTICLES  ಡಾ ಎ ವಿ ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ