ಕುಮಟಾ: ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ. ವಿಶ್ವದ ಪ್ರಭಲ ರಾಷ್ಟ್ರ ಚೀನಾವೂ ಭಾರತದ ಪ್ರತಿಸ್ಪರ್ಧಿಯಾಗಿದೆ. ಅಚಲ ಛಲ ಹಾಗೂ ವಿಶ್ವಾಸ ಈ ದೇಶದ ಪ್ರಭಲ ಅಸ್ತ್ರ ಎಂದು ಕುಮಟಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಸುಬ್ರಾಯ ಭಟ್ಟ ಹೇಳಿದರು. ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸರಸ್ವತಿ ವಿದ್ಯಾಕೇಂದ್ರದಲ್ಲಿ 2017-18 ನೇ ಸಾಲಿನ ಶಾಲಾಸಂಸತ್ ಉದ್ಘಾಟಿಸಿ ಮಾತನಾಡಿದರು.
ಮೌಲ್ಯಯುತ ಸಮಾಜ ನಿರ್ಮಾಣವಾಗಬೇಕು ಎಂದರೆ ವಿದ್ಯಾರ್ಥಿಗಳು ಮೌಲ್ಯವಂತರಾಗಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಬೃಷ್ಟಾಚಾರದ ಪೆಡಂಬೂತ ಕಾಡುತ್ತಿದೆ. ಈಗಿನ ಮಕ್ಕಳು ಮುಂದಿನ ಭವಿಷ್ಯವಾಗಿರುವುದರಿಂದ ಮೌಲ್ಯಯುತ ಜೀವನ ನಡೆಸಲು ಕಲಿತ ಮಕ್ಕಳು ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಹಾಗೂ ಭಾರತದ ಸೈನ್ಯ ಪಡೆಗಳ ವಿವರದ ಮೂಲಕ ಮಕ್ಕಳಿಗೆ ನಮ್ಮ ಶಕ್ತಿ ಎಷ್ಟೆಂಬುದನ್ನು ವಿವರಿಸಿದರು. ಸಂಸತ್ ಎಂಬುದು ದೇಗುಲವಿದ್ದಂತೆ ಪವಿತ್ರ ಶಬ್ಧ ಅದು ಮಕ್ಕಳೂ ಭವಿಷ್ಯದ ಕನಸುಕಟ್ಟುವ ಸಮಯದಲ್ಲಿ ಸಂಸತ್‍ನ ಆನಂದ ಅರಿಯುತ್ತಿರುವುದು ಸಂತಸ ಎಂದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಈಶ್ವರ ಗೌಡ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಾದ ದೀಪಾ ಭಟ್ಟ, ರಾಹುಲ್ ಶಾನಭಾಗ, ಕುಲದೀಪ, ಕುಂಕುಮ,ಅಂಗದ, ಸಾಯಿಕಿರಣ,ವಿಭಾ ನಾಯ್ಕ, ಶುಭಾ ನಾಯ್ಕ ಪ್ರತಿಜ್ಞಾವಿಧಿ ಪಡೆದರು. ಅನಿಸಿಕೆ ವ್ಯಕ್ತಪಡಿಸಿದ ಶಾಲಾಸಂಸತ್ ಸಾಮಾನ್ಯ ಕಾರ್ಯದರ್ಶಿ ರಾಹುಲ್ ಶಾನಭಾಗ ಹಾಗೂ ದೀಪಾ ಭಟ್ಟ ಶಾಲಾ ಕೆಲಸ ಕಾರ್ಯದಲ್ಲಿ ಎಲ್ಲ ಶಿಕ್ಷಕರೊಂದಿಗೆ ಸಹಕರಿಸಿ ಶಾಲಾ ಅಭಿವೃದ್ದಿಗೆ ಸಹಕರಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವಿಶ್ವಸ್ಥರಾದ ಡಿ.ಡಿ ಕಾಮತ್ ಮಾತನಾಡಿ ಸಂಸತ್ ಅನ್ನು ಹೌಸ್ ಆಫ್ ಲಾರ್ಡ ಎನ್ನುತ್ತಾರೆ. ಇಲ್ಲಿ ಮಕ್ಕಳೂ ದೇವರೇ ದೇವರೇ ದೇವ ಮಂದಿರದ ಒಳಗೆ ಹೋಗುವ ಸಂದರ್ಭ ಇದು, ಟಿ.ವಿ ನೋಡಿ ಸಂಸತ್ ಬಗ್ಗೆ ತಿಳಿಯುವ ಪರಿಸ್ಥಿತಿ ಈಗಿಲ್ಲ. ಶಾಲೆಯಲ್ಲಿಯೇ ಸಂಸತ್ ಮೂಲಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ಪ್ರಯತ್ನ ನಡೆದಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಲ್ಲಿ ಸಂಸತ್ ಗೆ ಆಯ್ಕೆಯಾದವರು ಮುಂದೆ ಎಂ.ಎಲ್.ಎ ಹಾಗೂ ಎಂ.ಪಿಗಳಾಗಿ ದೇಶವನ್ನು ಮುನ್ನಡೆಸುವತ್ತ ಚಿಂತನೆ ನಡೆದರೆ ಈ ಕಾರ್ಯಕ್ಕೆ ಅರ್ಥಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್ ಎಚ್ ದೇಶಭಂಡಾರಿ, ಹಾಗೂ ಬಾಲಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ವೇದಿಕೆಯಲ್ಲಿದ್ದರು. ಶಿಕ್ಷಕ ಹಾಗೂ ಸಾಸ್ಕøತಿಕ ಸಮಿತಿ ಸದಸ್ಯ ಗಣೇಶ ಜೋಶಿ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ವಂದಿಸಿದರು. ಸಾಂಸ್ಕøತಿಕ ಸಮಿತಿಯ ಸದಸ್ಯೆ ಹಾಗೂ ಶಿಕ್ಷಕಿ ಪ್ರಜ್ಞಾ ನಾಯ್ಕ ನಿರೂಪಿಸಿದರು. ಗೌರೀಶ ಭಂಡಾರಿ, ಸುಮಂಗಲಾ ನಾಯ್ಕ ಸಹಕರಿಸಿದರು.