ಕುಮಟಾ :ತಾಲ್ಲೂಕಿನ ಹೆಬ್ಬೈಲ್ ಹಳ್ಳಕ್ಕೆ ನಿರ್ಮಿಸಿದ ಕಾಲು ಸಂಕ ದಾಟುವಾಗ ಜೋರಾಗಿ ಬೀಸಿದ ಗಾಳಿ ಮಳೆಯಿಂದಾಗಿ ಕಾಲು ಜಾರಿ ಪಕ್ಕದಲ್ಲಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದ ಜಗದೀಶ ಜಟ್ಟಿ ನಾಯ್ಕ ಇವರ ಕುಟುಂಬಕ್ಕೆ ಶಾಸಕರು ಸರಕಾರದಿಂದ‌ ಸಿಗುವ ಪರಿಹಾರ ದೊರಕಿಸಿ ಕೊಟ್ಟು ಕುಟುಂಬಕ್ಕೆ ಧೈರ್ಯ ತುಂಬಿದರು.

ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರಿಗೆ ಸರ್ಕಾರದಿಂದ ಸಿಗುವ ಐದು ಲಕ್ಷ ರೂಪಾಯಿ ಪರಿಹಾರದ ಹಣವನ್ನು ಶಾಸಕ ದಿನಕರ ಶೆಟ್ಟಿ ಜಗದೀಶ ನಾಯ್ಕ ಅವರ ಪತ್ನಿ ಶ್ರೀಮತಿ ಗೀತಾ ಜಗದೀಶ್ ನಾಯ್ಕ ರವರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಜಮಾ ಮಾಡಿದ ಆದೇಶ ಪ್ರತಿಯನ್ನು ಶ್ರೀಮತಿ ಗೀತಾ ಜಗದೀಶ್ ನಾಯ್ಕ್ ಅವರಿಗೆ ಹಸ್ತಾಂತರಿಸಿದರು .

RELATED ARTICLES  ಗಜು ಪೈ ಅಭಿಮಾನಿಗಳ ಬಳಗದವರಿಂದ ಯಶಸ್ವಿಯಾಗಿ ಸಂಯೋಜನೆಗೊಂಡ ಪೈ ಬ್ರದರ್ಸ್ ಟ್ರೋಫಿ.

ಶಾಸಕ ದಿನಕರ ಶೆಟ್ಟಿ ಅವರು ಹೆಬ್ಬೈಲ್ ಗೆ ತೆರಳಿ ಮೃತನ ಪತ್ನಿಗೆ ಸಾಂತ್ವನ ಹೇಳಿ ಮಕ್ಕಳಿಗೆ ಸಾಂತ್ವನ ಹೇಳಿದರು . ನಂತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ ಆದೇಶ ಪ್ರತಿಯನ್ನು ಜಗದೀಶ ನಾಯ್ಕ್ ಅವರ ಪತ್ನಿಗೆ ಹಸ್ತಾಂತರಿಸಿದರು .

RELATED ARTICLES  ಕಾರವಾರದಲ್ಲಿ ಸಂಪನ್ನವಾದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಜಾನನ ಪೈ , ಗ್ರಾಮ ಪಂಚಾಯಿತಿ ಸದಸ್ಯರಾದ ವಿನಾಯಕ ನಾಯಕ್, ಬಿಜೆಪಿ ಪ್ರಮುಖರಾದ ವಿನಾಯಕ ಭಟ್ ಸಂತೇಗುಳಿ, ತಹಶೀಲ್ದಾರ್ ಮೇಘರಾಜ ನಾಯ್ಕ , ಕಂದಾಯ ನಿರೀಕ್ಷಕ ಶ್ರೀನಿವಾಸ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು .