ಜೆಸಿಐ – ಜೂನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಹದಿನಾಲ್ಕು ಜಿಲ್ಲೆಗಳನ್ನು ಒಳಗೊಂಡಂತಹ ವಲಯ ಇಪ್ಪತ್ತ್ನಾಲ್ಕು ರ ಮಹಿಳಾ ಮತ್ತು ಮಕ್ಕಳ ಸಮ್ಮೇಳನ ರಾಯಚೂರು ಜಿಲ್ಲೆಯ ಇಲಿಕಲ್ ನಲ್ಲಿ ನಡೆಯಿತು .

ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೋಸ್ಕರ ನಡೆದಂತಹ ವಿಶೇಷವಾದಂತಹ ಫ್ಯಾಷನ್ ಶೋ ಕಾರ್ಯಕ್ರಮ, ಡ್ಯಾನ್ಸ್ ಕಾರ್ಯಕ್ರಮ ,ಗ್ರೂಪ್ ಡ್ಯಾನ್ಸ್ ಕಾರ್ಯಕ್ರಮ, ಸೆಲ್ಫಿ ಕಂಟೆಸ್ಟ್ ಚರ್ಚಾ ಸ್ಪರ್ಧೆ ,ಸ್ಪಿಕ್ ಅಂಡ್ ಸ್ಪೀಚ್ ಕಾರ್ಯಕ್ರಮ ,ಜೇಸಿನಲ್ಲಿ ನಡೆದಂತಹ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಅಧಿಕಾರಿಗಳಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಗುರುತಿಸುವ ಕೆಲಸವಾಯಿತು.

ಅನಂತರದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಮಹಿಳಾ ಸಬಲೀಕರಣ ಹಾಗೂ ಉತ್ತಮ ನಾಗರಿಕರಾಗಲು ಮಹಿಳೆಯರ ಪಾತ್ರ ಮತ್ತು ಮಕ್ಕಳ ಪಾತ್ರ ಇದರ ಬಗ್ಗೆ ತರಬೇತಿದಾರರಿಂದ ತರಬೇತಿಯನ್ನು ಕುಡಿಸಲಾಯಿತು .

RELATED ARTICLES  ನಾಳೆಯಿಂದ ನೈಟ್ ಕರ್ಫ್ಯೂ ಮತ್ತು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ

ಜೆಸಿಐ ಸೊರಬ ಸಿಂಧೂರ ಮಹಿಳಾ ಘಟಕದ ಅಧ್ಯಕ್ಷರಾದ ಪೂಜಾ ಪ್ರಶಾಂತ್ ದೊಡ್ಡಮನೆ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹಿಳಾ ಫ್ಯಾಷನ್ ಶೋನಲ್ಲಿ ದ್ವಿತೀಯ ಸ್ಥಾನ ,
ಮಗು ಮತ್ತು ಮಕ್ಕಳಿಗೋಸ್ಕರ ಆಯೋಜಿಸಿದ ವಿಶೇಷವಾದ ಫ್ಯಾಷನ್ ಶೋನಲ್ಲಿ ತೃತೀಯ ಸ್ಥಾನ ,
ಮಹಿಳಾ ಗ್ರೂಪ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೃತೀಯ ಸ್ಥಾನ ,
ಸುಮಾರು ಒಂಬತ್ತು ಕ್ಕೂ ಹೆಚ್ಚು ರೆಕಗ್ನೆಷನ್ ಗಳನ್ನು ಈ ಒಂದು ಕಾರ್ಯಕ್ರಮದಲ್ಲಿ ಪಡೆಯಲಾಯಿತು. ಈ ಎಲ್ಲಾ ಸಾಧನೆಯನ್ನು ಮೆಚ್ಚಿ “ಬೆಸ್ಟ್ ಪಾರ್ಟಿಸಿಪೇಷನ್ ಇನ್ ಕನ್ವೆನ್ಷನ್” ಎಂಬ ಗೌರವದಲ್ಲಿ ದ್ವಿತೀಯ ಸ್ಥಾನವನ್ನು ಪೂಜಾ ಪ್ರಶಾಂತ್ ದೊಡ್ಡಮನೆ ಇವರು ಪಡೆದರು.
ಈ ಸಮ್ಮೇಳನದಲ್ಲಿ ವಲಯ ಅಧ್ಯಕ್ಷರಾದ ಪವನ್ ಕುಮಾರ್ ಜೇಸಿಐ ಭಾರತದ ಮಹಿಳಾ ನಿರ್ದೇಶಕರಾದ ಕವಿತಾ ಸೋನಿ ,ರೂಪಶ್ರೀ ,ಸವಿತಾ, ಮಂಜುಳಾ, ಸಂಗೀತ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ

ಇದೇ ಸಂದರ್ಭದಲ್ಲಿ ಜೆಸಿಐ ಸೊರಬ ವೈಜಯಂತಿ ವತಿಯಿಂದ ನಡೆಸುತ್ತಿರುವ ಪರಿಸರ ಜಾಗೃತಿಯ ಪರ್ಯಾವರಣ ಯಾತ್ರೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ ಜೇಸಿಐ ಭಾರತದ ಮಹಿಳಾ ವಿಭಾಗದ ರಾಷ್ಟ್ರೀಯ ನಿರ್ದೇಶಕರಾದ ಕವಿತಾ ಸೋನಿ ಅವರಿಗೆ ಗಿಡವನ್ನು ಕೊಡುವುದರ ಮೂಲಕ ಪರಿಸರ ಜಾಗೃತಿಯ ಅರಿವನ್ನು ರಾಷ್ಟ್ರಮಟ್ಟದಲ್ಲಿ ಮೂಡಿಸಬೇಕು ಎಂದರು .