ಕಾರವಾರ: ಆ.10ರಂದು ನಡೆದ ಜೈವಿಕ ಇಂಧನ ದಿನಾಚರಣೆಯ ಮುಂದುವರಿದ ಚಟುವಟಿಕೆಯಾಗಿ ಅಗಸ್ಟ 25ರಂದು ಕಾರವಾರ ತಾಲೂಕಿನ ಎಲ್ಲ ಶಾಲೆಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ.
ಚಿತ್ರಕಲಾ ಸ್ಪರ್ಧೆ: 1ರಿಂದ 5ನೇ ತರಗತಿಯವರೆಗೆ. ವಿಷಯ: ಬದಲಿ ಇಂಧನ ವ್ಯವಸ್ಥೆ
ಪ್ರಬಂಧ ಸ್ಪರ್ಧೆ: 6ರಿಂದ 8ನೇ ತರಗತಿಯವರೆಗೆ. ವಿಷಯ: ಇಂದಿನ ಪರಿಸ್ಥಿತಿಯಲ್ಲಿ ಜೈವಿಕ ಇಂಧನ ಅನಿವಾರ್ಯ
ಭಾಷಣ ಸ್ಪರ್ಧೆ: ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ. ವಿಷಯ: ನಮ್ಮ ದೇಶದಲ್ಲಿ ಜೈವಿಕ ಇಂಧನ ಅಭಿವೃದ್ಧಿಯ ಸಾಧ್ಯತೆ
ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಿ ವಿಜ್ಞಾನ ಬೋಧಿಸುವ ಒಬ್ಬ ಶಿಕ್ಷಕರ ಜೊತೆ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬೆಳಿಗ್ಗೆ 9.30ಕ್ಕೆ ಸರಿಯಾಗಿ ಹಾಜರಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪರ್ಧೆಯ ನಂತರ ಜೈವಿಕ ಇಂಧನ ಸಿದ್ಧಪಡಿಸುವ ವಿಧಾನ ಮತ್ತು ಜೈವಿಕ ಇಂಧನ ಸಸ್ಯಗಳ ಪರಿಚಯ ನೀಡಲಾಗುವುದು. ಈ ಕಾರ್ಯಕ್ರಮವನ್ನು ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರ, ಕೈಗಾ ನಿಲಯ, ಕೋಡಿಬಾಗ, ಕಾರವಾರ ನಡೆಸಿಕೊಡಲಿದೆ.