ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮವನ್ನು ಕಳೆದ 7 ವರ್ಷಗಳಿಂದ ಆಯೋಜಿಸುತ್ತಿದೆ. ಜಿಲ್ಲೆಯಾದ್ಯಂತ 18-19ನೇ ಸಾಲಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ,್ರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಡೆಸಲಿದ್ದು ಈ ಕಾರ್ಯಕ್ರಮಕ್ಕೆ ದಿನಾಂಕ 25ರಂದು ವಿದ್ಯುಕ್ತ ಚಾಲನೆಯನ್ನು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಭಾಗವಹಿಸಲಿರುವ ಈ ಚಟುವಟಿಕೆಯಲ್ಲಿ ಶಾಲೆಯ ಪರಿಸರ, ಗಾಳಿ, ನೀರು, ಮಣ್ಣು, ಶಕ್ತಿಯ ನಿರ್ವಹಣೆ ಮತ್ತು ವಯಕ್ತಿಕ ಆರೋಗ್ಯದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿ ಮಕ್ಕಳೇ ಶಾಲೆಯ ಪರಿಸ್ಥಿತಿಯ ಅಧ್ಯಯನ ಮಾಡಿ ಸ್ವಮೌಲ್ಯಮಾಪನ ಮಾಡಲಿದ್ದಾರೆ.

RELATED ARTICLES  ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆದ ಗುರುವಂದನಾ ಸಮಾರಂಭ.

ಜಿಲ್ಲೆಯನ್ನು ಎರಡು ಶೈಕ್ಷಣಿಕ ಜಿಲ್ಲೆಗಳನ್ನಾಗಿ ವಿಂಗಡಿಸಿ ಪ್ರತಿ ಶೈಕ್ಷಣಿಕ ಜಿಲ್ಲೆಯಲ್ಲಿ 21 ಶಾಲೆಗಳನ್ನು ಆಯ್ಕೆ ಮಾಡಿ ಅನುಕ್ರಮವಾಗಿ ಪರಿಸರ ಮಿತ್ರ ಶಾಲೆ, ಹಸಿರು ಶಾಲೆ, ಹಳದಿಶಾಲೆ ಎಂದು ವಿಂಗಡಿಸಿ ನಗದು ಹಣ ಮತ್ತು ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಮಂಡಳಿಯು ಸುಮಾರು 2.4 ಲಕ್ಷ ಹಣವನ್ನು ಒಟ್ಟು 42 ಶಾಲೆಗಳಿಗೆ ಬಹುಮಾನ ರೂಪದಲ್ಲಿ ನೀಡಲಿದೆ. ಮಕ್ಕಳ ಈ ಚಟುವಟಿಕೆ ಕೇವಲ ಶಾಲಾ ಆವರಣಕ್ಕೆ ಸೀಮಿತವಾಗಿರದೆ ಪ್ರತಿಯೊಂದು ಮನೆ ಮತ್ತು ಹಳ್ಳಿಗಳನ್ನು ತಲುಪಬೇಕೆನ್ನುವುದೇ ಈ ಯೋಜನೆಯ ಉದ್ದೇಶವಾಗಿದ್ದು ಈ ವರ್ಷ ವಿಶೇಷವಾಗಿ ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಉದ್ದೇಶವಿದೆ.

RELATED ARTICLES  ಮೊಬೈಲ್ ಕದ್ದು ಹೋಗ್ತಾರೆ ಹುಷಾರ್..!

ಈ ಕಾರ್ಯಕ್ರಮದ ಉದ್ದೇಶ ಸಾರ್ವಜನಿಕರಿಗೆ ತಲುಪಿ ಸ್ವಚ್ಛ ಸುಂದರ ನಾಡಿನ ನಿರ್ಮಾಣದಲ್ಲಿ ಯುವ ಪೀಳಿಗೆ ಪಾಲ್ಗೊಳ್ಳಬೇಕೆನ್ನುವುದು ಈ ಯೋಜನೆಯ ಉದ್ದೇಶವಾಗಿದ್ದು ಜಿಲ್ಲೆಯ ಪ್ರತಿಯೊಂದು ಶಾಲೆಯೂ ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿ ಮಾಡಿಕೊಳ್ಳಲು ಡಾ. ವಿ. ಎನ್. ನಾಯಕ, ಗೌರವ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ಕಾರವಾರ ಇವರನ್ನು ದೂರವಾಣಿ ಸಂ. 08382 221448, ಮೊ. ಸಂ. 8762891448, 9449032795, ಇಮೇಲ್: [email protected] ಸಂಪರ್ಕಿಸಬಹುದು.