ಕುಮಟಾ: ಗಾಂಧಿ ಹುಟ್ಟಿ ನೂರೈವತ್ತು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಶ್ರೇಷ್ಠ ಮಾನವತಾವಾದಿ ಮಹಾತ್ಮಾ ಗಾಂಧಿಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ “ಗಾಂಧಿ-150” ರಂಗ ಪಯಣವು ದಿ.24 ಶುಕ್ರವಾರ ಬೆ. 10 ಕ್ಕೆ ಸರಿಯಾಗಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ‘ಪಾಪು ಗಾಂಧಿ, ಗಾಂಧಿ ಬಾಪು’ ಆದ ಕತೆಯ ರಂಗರೂಪಕದ ಪ್ರದರ್ಶನ ಏರ್ಪಡಿಸಲಾಗಿದೆ.
ಕನ್ನಡ ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಂತನ ರಂಗ ಅಧ್ಯಯನ ಕೇಂದ್ರ ಸಂಘಟನೆಯ ಈ ನಾಟಕವು ಬೋಳುವಾರು ಮಹಮ್ಮದ್ ಕುಂಞ ವಿರಚಿತ ಡಾ.ಶ್ರೀಪಾದ ಭಟ್ಟ ಅವರ ನಿರ್ದೇಶನ, ಮಧ್ವರಾಜ್ ಅವರ ನೇತೃತ್ವದಲ್ಲಿ ಮೂಡಿ ಬರಲಿದೆ. ತಾಲೂಕಿನಲ್ಲಿ ಮೊದಲ ಬಾರಿ ನಡೆಯುವ ಈ ಪ್ರದರ್ಶನಕ್ಕೆ ಚಾಲನೆ ನೀಡಲು ಕೆನರಾ ಎಜ್ಯುಕೇಶನ್ ಸೊಸೈಟಿ ನಿರ್ದೇಶಕ ಕೃಷ್ಣದಾಸ ಪೈ, ಹಿರಿಯ ಚಿಂತಕ ಮತ್ತು ಗಾಂಧೀವಾದಿ ಶೇಷಗಿರಿ ಶಾನಭಾಗ, ಗಿಬ್ ಪ್ರೌಢಶಾಲೆಯ ವಿಶ್ರಾಂತ ಮುಖ್ಯಾಧ್ಯಾಪಕ ಮುರಲೀಧರ ಪ್ರಭು, ರಂಗಕರ್ಮಿ ಕಿರಣ ಭಟ್ ಆಗಮಿಸಲಿದ್ದಾರೆ. ರಂಗಾಸಕ್ತರು ಪಾಲ್ಗೊಳ್ಳಬಹುದೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home Uttara Kannada ದಿ.24 ಕ್ಕೆ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ‘ಗಾಂಧಿ-150’: ನಡೆಯಲಿದೆ ರಂಗ ರೂಪಕದ ಪ್ರದರ್ಶನ.