ಬೆಂಗಳೂರು- ರಾಜ್ಯದ ಕೊಡಗು, ಕರಾವಳಿ ಪ್ರದೇಶ ಹಾಗೂ ನೆರೆಯ ರಾಜ್ಯವಾದ ಕೇರಳದಲ್ಲಿ ಉಂಟಾದ ಪ್ರವಾಹದಿಂದ ಬಸ್‌ಗಳ ಸಂಚಾರ ರದ್ದು ಪಡಿಸಿದ್ದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಟ್ಟು 3.42 ಕೋಟಿ ರೂ. ನಷ್ಟ ಉಂಟಾಗಿದೆ.
ಮಳೆಯಿಂದ ಸುಮಾರು 1 ಲಕ್ಷ 7,515 ಕಿ.ಮೀ. ಬಸ್‌ಗಳ ಓಡಾಟ ಸ್ಥಗಿತಗೊಂಡಿದ್ದು ಸುಮಾರು 2445 ಬಸ್‌ಗಳ ಮಾರ್ಗ ಸಂಚಾರ ರದ್ದುಗೊಳಿಸಲಾಗಿತ್ತು. ಹೀಗಾಗಿ ಕೆಎಸ್ಆರ್‌ಟಿಸಿ ಸುಮಾರು 3 ಕೋಟಿ 42 ರೂ. ನಷ್ಟ ಅನುಭವಿಸಿದೆ.
ಕೇರಳಕ್ಕೆ ತೆರಳುವ ಬಸ್‌ಗಳ ಸ್ಥಗಿತದ ಜತೆಗೆ ಮಂಗಳೂರು ಮತ್ತು ಮಡಕೇರಿ ವಿಭಾಗಗಳಲ್ಲಿ ಬಸ್‌ಗಳ ಓಡಾಟ ರದ್ದುಗೊಳಿಸಲಾಗಿತ್ತು. ಹಾಗಾಗಿ ಕೆಎಸ್ಆರ್‌ಟಿಸಿಗೆ ಸಾಕಷ್ಟು ಆದಾಯ ಖೋತಾ ಆಗಿದೆ.
ಮಳೆಯಿಂದ ಜನ ಮುಂಗಡ ಕಾದಿರಿಸಿದ್ದ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದು, ಸುಮಾರು 17,175 ಮಂದಿ ತಮ್ಮ ಟಿಕೆಟ್‌ಗಳನ್ನು ರದ್ದುಪಡಿಸಿದ್ದು, ಪ್ರಯಾಣಿಕರಿಗೆ ಸುಮಾರು 1 ಕೋಟಿ 18 ಲಕ್ಷ ರೂ. ಟಿಕೆಟ್ ಹಣವನ್ನು ವಾಪಸ್ ನೀಡಲಾಗಿದೆ.