ನಿಮ್ಮ ಮುಖದ ಕಾಂತಿಯನ್ನು ಕಣ್ಣ ಸುತ್ತ ಮೂಡುವ ಈ ಕಪ್ಪು ಕಲೆಗಳು ಕೆಡಿಸಬಲ್ಲವು.ಈ ಕಪ್ಪು ಕಲೆಗೆ ಡಾರ್ಕ್ ಸರ್ಕಲ್ ಎಂದು ಕರೆಯಲಾಗುತ್ತದೆ. ನೋಡಲು ಸಾಮಾನ್ಯವಾದ ವಿಷಯ ಎನಿಸಿದರೂ,
ಕಣ್ಣ ಸುತ್ತ ಮೂಡುವ ಕಪ್ಪು ಕಲೆಗಳು ಅನಾರೋಗ್ಯ ಅಥವಾ ತೀರಾ ಸುಸ್ತಾದ ಇಮೇಜ್ನ್ನು ನೀಡುತ್ತದೆ. ಇಂತಹ ಕಲೆಗಳು ಮೂಡಲು ಕಾರಣ ಹಲವಿರಬಹುದು. ನಿದ್ದೆ ಸಮಸ್ಯೆ, ಬಿಸಿಲು ಇತ್ಯಾದಿ.

ಈ ಕಪ್ಪು ಕಲೆಗಳಿಂದ ಮುಖವನ್ನು ರಕ್ಷಿಸಲು ಇಲ್ಲಿವೇ ಕೆಲವು ಟಿಪ್ಸ್.

ಟೊಮ್ಯಾಟೋ: ಕಪ್ಪು ಕಲೆಗಳಿಗೆ ಟೊಮ್ಯಾಟೋ ಉತ್ತಮ ಪರಿಹಾರ. ಸ್ವಲ್ಪ ಟೊಮ್ಯಾಟೋ ಪೇಸ್ಟ, ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕಣ್ಣಿನ ಸುತ್ತ ಹಚ್ಚಿ. 10 ನಿಮಿಷದ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿ ಆದರೂ ಮಾಡಿ. ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಬಾದಾಮಿ ಎಣ್ಣೆ: ರಾತ್ರಿ ಮಲಗುವ ಮುನ್ನ ಸ್ವಲ್ಪ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಮಸಾಜ್ ಮಾಡಿ. ಬೆಳಿಗ್ಗೆ ಎದ್ದು ಮುಖವನ್ನು ತಂಪಾದ ನೀರಿನಿಂದ ತೊಳೆಯಿರಿ.

RELATED ARTICLES  ರೋಗ ಬಂದ ಮೇಲೆ ಚಿಕಿತ್ಸೆಗಿಂತ ರೋಗದ ತಡೆ ಲೇಸಲ್ಲವೆ?

ಸೌವತೆಕಾಯಿ: ಸೌವತೆಕಾಯಿಯನ್ನು ಕತ್ತರಿಸಿ ಪೀಸ್ ಮಾಡಿ 30 ನಿಮಿಷ ಫ್ರಿಡ್ಜ್ನಲ್ಲಿಡಿ. ನಂತರ ಕಣ್ಣುಗಳ ಮೇಲೆ ಸವತೆಕಾಯಿ ಪೀಸ್ ಇಟ್ಟು 10 ನಿಮಿಷದ ನಂತರ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಈ ವಿಧಾನ ಕೇವಲ ಕಪ್ಪು ಕಲೆ ತೆಗೆಯುವುದಲ್ಲದೇ ಕಣ್ಣಿಗೆ ಆರಾಮವನ್ನೂ ನೀಡುತ್ತದೆ

ಬಟಾಟೆ: ಒಂದು ಅಥವಾ 2 ಬಟಾಟೆಯನ್ನು ರುಬ್ಬಿಕೊಂಡು ರಸ ತೆಗೆಯಿರಿ. ನಂತರ ಹತ್ತಿಯ ಉಂಡೆಯ ಸಹಾಯದಿಂದ ಬಟಾಟೆ ರಸವನ್ನು ಕಣ್ಣಿನ ಕಪ್ಪು ಕಲೆಯ ಸುತ್ತ ಹಚ್ಚಿ. 10-15 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿಯಂತೆ ಕೆಲ ವಾರಗಳ ಕಾಲ ಮಾಡಿ. ಬಟಾಟೆ ರಸದ ಬದಲು, ಸ್ಲೈಸ್ನ್ನು ಕೂಡ ಕಪ್ಪು ಕಲೆ ನಿವಾರಿಸಲು ಬಳಸಬಹುದು.

ತಂಪಾದ ಹಾಲು: ಸಾಮಾನ್ಯವಾಗಿ ಬಳಸುವ ತಂಪಾದ ಹಾಲು ಕಣ್ಣಿನ ಕಲೆಯನ್ನು ತೊಲಗಿಸುವುದರ ಜೊತೆಗೆ ಆರಾಮವನ್ನೂ ನೀಡುತ್ತದೆ. ಕಾಟನ್ ನ್ನು ಹಾಲಿನಲ್ಲಿಅದ್ದಿ ಕಪ್ಪು ಕಲೆಯ ಸುತ್ತಲೂ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಂಪಾದ ನೀರಿನಿಂದ ತೊಳೆಯಿರಿ.

RELATED ARTICLES  ಆರೋಗ್ಯಕರ ಜೀವನದ ಗುಟ್ಟು ಏನು ಗೊತ್ತಾ?

ರೋಸ್ ವಾಟರ್: ರೋಸ್ ವಾಟರ್ ಸ್ಕಿನ್ ಟೋನರ್ ಆಗಿ ಕೆಲಸ ಮಾಡುತ್ತದೆ. ಹತ್ತಿಯನ್ನು ರೋಸ್ ವಾಟರ್ನಲ್ಲಿ ಅದ್ದಿ, ಕಣ್ಣಿನ ಮೇಲೆ ಇಡಿ. ಪ್ರತಿನಿತ್ಯ ಎರಡು ಬಾರಿ ಹೀಗೆ ಮಾಡುವುದರಿಂದ ಕಪ್ಪು ಕಲೆ ಮಾಯವಾಗುತ್ತದೆ.

ಕಿತ್ತಳೆ ರಸ: ಕಿತ್ತಳೆ ರಸಕ್ಕೆ, ಒಂದೆರಡು ಹನಿ ಗ್ಲಿಸರಿನ್ ಸೇರಿಸಿ ಕಣ್ಣಿನ ಸುತ್ತ ಹಚ್ಚಿ. ಇದು ಕಪ್ಪು ಕಲೆ ನಿವಾರಿಸುವುದಲ್ಲದೆ, ಕಣ್ಣಿನ ಸುತ್ತ ನೈಸರ್ಗಿಕವಾಗಿಯೇ ಕಾಂತಿ ನೀಡುತ್ತದೆ.

ಪುದಿನ ಎಲೆ: ಸ್ವಲ್ಪ ಪುದಿನ ಎಲೆಯನ್ನು ತೆಗೆದುಕೊಂಡು ಜಜ್ಜಿ ರಸ ತೆಗೆಯಿರಿ. ಈ ರಸವನ್ನು ಕಣ್ಣಿನ ಸುತ್ತ ಹಚ್ಚಿ 10 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಂಪಾದ ನೀರಿನಿಂದ ಮುಖ ತೊಳೆಯಿರಿ. ಕಣ್ಣು ತುಂಬಾ ಸೂಕ್ಷ್ಮವಾದ ಭಾಗವಾದ್ದರಿಂದ ಕಿತ್ತಳೆ ಅಥವಾ ಪುದಿನ ರಸ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿ.