ಅಂಕೋಲಾ: ತಾಲ್ಲೂಕಿನ ಹಟ್ಟಿಕೇರಿಯ ರೈಲ್ವೆ ಹಳಿಯ ಮೇಲೆ ಯುವಕನೊಬ್ಬನ ಮೃತ ದೇಹ ಪತ್ತೆಯಾಗಿದೆ. ರುಂಡ ಹಾಗೂ ದೇಹ ಬೇರೆಬೇರೆಯಾದ ಸ್ಥಿತಿಯಲ್ಲಿದ್ದು ಭಯ ಹುಟ್ಟಿಸುವ ರೀತಿಯಲ್ಲಿ ಸಾವು ಸಂಭವಿಸಿದೆ.
ಮೃತನ ಬಟ್ಟೆಯಲ್ಲಿ ಸಿಕ್ಕಿದ ಚುನಾವಣಾ ಗುರುತಿನ ಚೀಟಿಯ ಪ್ರಕಾರ, ಬಾಳೆಗುಳಿಯ ವಿನಾಯಕ ನಾಯ್ಕ (27) ಎಂದು ಗುರುತಿಸಲಾಗಿದೆ. ಯುವಕನ ಬೈಕ್ ಹಳಿಯ ಕೆಳಭಾಗದಲ್ಲಿ ಸಿಕ್ಕಿದೆ.
ಇದು ಆತ್ಮಹತ್ಯೆ ಎನ್ನಲಾಗುತ್ತಿದ್ದು, ಯುವಕನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ತನಿಖೆ ನಂತರ ಪೂರ್ಣ ಮಾಹಿತಿ ಹೊರ ಬರಲಿದೆ.