ಪಾಲೆಂಬಾಗ್ : 18ನೇ ಏಶ್ಯಾಡ್ ಗೇಮ್ಸ್ ಜಕಾರ್ತದಲ್ಲಿ ನಡೆಯುತ್ತಿದ್ದು, ಮಹಿಳಾ ಟೆನ್ನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಂಕಿತಾ ರೈನಾ ಕಂಚಿನ ಪದಕ ಗೆದ್ದಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ನಡೆದ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯಾಟದಲ್ಲಿ ಭಾರತದ ಅಗ್ರ ಕ್ರಮಾಂಕದ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಚೀನಾದ ಶುಯಿ ಜಾಂಗ್ ಅವರನ್ನು 4-6,6-7 (6) ಸೆಟ್ಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಏಶ್ಯಾನ್ ಗೇಮ್ಸ್ ಇತಿಹಾಸದಲ್ಲಿ ಅಂಕಿತಾ ರೈನಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಕೆಗೆ ಪಾತ್ರರಾಗಿದ್ದಾರೆ.

RELATED ARTICLES  ಬೆಳಗೆರೆಗೆ ಭೂಗತ ಲೋಕದ ನಂಟಿದೆ – ಸುನಿಲ್ ಹೆಗ್ಗರವಳ್ಳಿ ಗಂಭೀರ ಆರೋಪ

25ರ ಹರೆಯದ ಅಂಕಿತಾ ರೈನಾ ಇವರು ಅಹಮದಾಬಾದ್ ಮೂಲ. ಈವರೆಗೆ ಅಂತಾರಾಷ್ತ್ರೀಯ ಮಟ್ಟದಲ್ಲಿ 6 ಸಿಂಗಲ್ಸ್ ಮತ್ತು 13 ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

RELATED ARTICLES  ಹುಚ್ಚ ವೆಂಕಟ್ ಮೇಲೆ ಹಲ್ಲೆ! ವೆಂಕಟ್ ಏನು ಹೇಳಿದರು ಗೊತ್ತಾ?