ಅಂಕೋಲಾ: ಕರ್ನಾಟಕ ರಾಜ್ಯ ಕ್ರಿಕೇಟ್ ಇತಿಹಾಸದಲ್ಲಿ ಇನಿಂಗ್ಸ ಒಂದರಲ್ಲಿ 9 ವಿಕೇಟ ಪಡೆಯುವುದರ ಮೂಲಕ ‘ಆಶಿಕ ವಿಕಾಸ ನಾಯಕ’ ಸರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾನೆ.

ಬೆಂಗಳೂರಿನ ಸೆಂಟ್ ಜೊಸೇಪ್ ತಂಡದ ಪರವಾಗಿ ಆಡುತ್ತಿರುವ ಇತ ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆ (K.S.C.A) ಯ 16 ವರ್ಷದ ವಯೋಮಿತಿಯ First Division State League ‘KSCA CUP” Tournament ನಲ್ಲಿ ಸಾಂಪ್ರದಾಯಿಕ ಎದುರಾಳಿ presidency ವಿರುದ್ದ J.S.S.Turf ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಇನಿಂಗ್ಸನಲ್ಲಿ ಲೆಗ್ ಸ್ಪಿನ್ ಮೂಲಕ 12.4-06-23-9 ವಿಕೇಟ್ ಪಡೆದು ನೂತನ ಸರ್ವಕಾಲಿಕ ದಾಖಲೆಯನ್ನು ನಿರ್ಮಿಸಿರುತ್ತಾನೆ.

RELATED ARTICLES  ಗೋಡೆಯ ನಡುವೆ ಅವಿತು ಕುಳಿತಿದ್ದ 14 ಅಡಿ ಬೃಹತ್ ಕಾಳಿಂಗ..!

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಮ್ಮೆಯ ಪುತ್ರ ಆಶಿಶ್ ವಿಕಾಶ ನಾಯಕ ಒಟ್ಟು ಈ ಪಂಧ್ಯದಲ್ಲಿ 13 ವಿಕೆಟ್ಗಳನ್ನು ಹಾಗೂ 52 Not our Run ಗಳನ್ನು ಗಳಿಸಿ ಅದ್ಭುತ All Round ಪ್ರದರ್ಶನವನ್ನು ನೀಡಿರುತ್ತಾರೆ.

RELATED ARTICLES  ನಾಯಿ ಅಡ್ಡ ಬಂದು ಜಾರಿತು ಬೈಕ್?, ಹಾರಿತು ಒಬ್ಬಳ ಜೀವ! ಬಸ್ ಅಪಘಾತದ ಬಗ್ಗೆ ಪ್ರಕರಣ ದಾಖಲು: ಹುಟ್ಟಿದೆ ಹಲವಾರು ಗೊಂದಲ.

ಬೆಂಗಳೂರಿನ ಸೆಂಟ್ ಜೋಸೆಫ್ ಸಂಸ್ಥೆಯ ಪ್ರಾಂಶುಪಾಲರಾದ ಫಾದರ್ ಹೆನ್ರಿ ಸಲ್ದಾನಾ ತರಬೇತುದಾರರಾದ ಎಲ್.ಕೆ ವಿಶ್ವನಾಥ ಹಾಗೂ ಸಿಬ್ಬಂಧಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.