ಕುಮಟಾ: ಮಾಜಿ ಪ್ರಧಾನಿ ಅಟಲ್ ಜಿ ಯವರ ಅಸ್ತಿಯನ್ನು ಗೋಕರ್ಣದಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆ.25ರಂದು ಜಿಲ್ಲೆಗೆ ಅಸ್ಥಿ ಕಲಶ ಬರಲಿದ್ದು, ಹೊನ್ನಾವರದ ಶರಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ, ಅಂದು ಸಚಿವ ಅನಂತಕುಮಾರ ಹೆಗಡೆಯವರು ಬೆಂಗಳೂರಿನಲ್ಲಿ ಇಲಾಖೆಯೊಂದರ ಸಭೆಯಲ್ಲಿ ಬಾಗಿಯಾಗಬೇಕಿರುವುದರಿಂದ ಅಸ್ಥಿ ವಿಸರ್ಜನೆ ದಿನವನ್ನು ಆ.27ಕ್ಕೆ ಮುಂದೂಡಲಾಗಿದೆ. ವಿಸರ್ಜನೆ ಸ್ಥಳವನ್ನು ಹೊನ್ನಾವರದಿಂದ ಗೋಕರ್ಣಕ್ಕೆ ವರ್ಗಾವಣೆ ಮಾಡಲಾಗಿದೆ.

RELATED ARTICLES  ಅಪಘಾತ : ಸವಾರನ ತಲೆ, ಕೈ, ಕಾಲಿಗೆ ಪೆಟ್ಟು

ಇಂದು ಶಿರಸಿಗೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯು ಇಂದು ಶಿರಸಿ ಪಟ್ಟಣಕ್ಕೆ ಪ್ರವೇಶಿಸಿದೆ.

ಇಂದು ಬಿಜೆಪಿ ಕಾರ್ಯಾಲಯ ಬೆಂಗಳೂರಿನಲ್ಲಿ ನಮ್ಮ ಹೆಮ್ಮೆಯ ನಾಯಕರು, ಅಜಾತಶತ್ರು, ಭಾರತ ರತ್ನ, ಬಿಜೆಪಿಯ ಸೃಷ್ಟಿಕರ್ತರು, ಜಗತ್ತು ಕಂಡ ಶ್ರೇಷ್ಠ ಪ್ರಧಾನಿಗಳಲ್ಲೊಬ್ಬರು ಆದ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನ ಪ್ರಸಿದ್ಧ ಶರಾವತಿ ನದಿಯಲ್ಲಿ ವಿಸರ್ಜನೆ ಮಾಡುವ ಸಲುವಾಗಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಜು ಭಂಡಾರಿ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಭಟ್ಕಳ ಹೊನ್ನಾವರ ಶಾಸಕ ಸುನಿಲ್ ನಾಯ್ಕ ಸ್ವೀಕರಿಸಿದರು.

RELATED ARTICLES  ಭಾಸ್ಕರ ಗಾಂವ್ಕರ ರವರಿಗೆ ಸನ್ಮಾನ ಕಾರ್ಯಕ್ರಮ

ಶಿರಸಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅಸ್ಥಿಯನ್ನು ಇಡಲಾಗುತ್ತಿದ್ದು, ಸ್ಥಳವನ್ನು ಈಗ ನಿರ್ಧರಿಸಲಾಗುತ್ತಿದೆ. ಸಾರ್ವಜನಿಕ ದರ್ಶನದ ಬಳಿಕ ಕುಮಟಾ ಬಿಜೆಪಿ ಕಚೇರಿಯಲ್ಲಿ ಅಸ್ಥಿ ಕಲಶವನ್ನು ಇಡಲಾಗುತ್ತದೆ‌. ಬಳಿಕ ಸೋಮವಾರ (ಆ.27) ಗೋಕರ್ಣದಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ ಅಲ್ಲೇ ವಿಸರ್ಜನೆ ಮಾಡಲಾಗುತ್ತದೆ.