ಕುಮಟಾ: ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು .

ಆಸ್ಪತ್ರೆಯ ಪ್ರತಿಯೊಂದು ವಾರ್ಡ್ಗಳಿಗೆ ಭೇಟಿ ನೀಡಿದ ಅವರು ರೋಗಿಗಳು ಮತ್ತು ರೋಗಿಗಳ ಸಹಾಯಕ್ಕಾಗಿ ಬಂದವರನ್ನು ಮಾತನಾಡಿಸಿದರು . ಆಸ್ಪತ್ರೆಯ ವೈದ್ಯಾಧಿಕಾರಿಗಳು ರೋಗಿಗಳ ಬಗ್ಗೆ ನೀಡುವ ಗಮನ ಬಗ್ಗೆ ವಿಚಾರಿಸಿದರು.

ಇದೇ ವೇಳೆ ನೆಲಮಹಡಿಯಲ್ಲಿರುವ ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇರದೇ ಇರುವ ಬಗ್ಗೆ ಶಾಸಕರ ಗಮನಕ್ಕೆ ಬಂದಾಗ ಮೊದಲನೇ ಮಹಡಿಗೆ ಸೋಲಾರ್ ವ್ಯವಸ್ಥೆಯ ಮೂಲಕ ಬಿಸಿನೀರು ಕಲ್ಪಿಸಲಾಗಿದೆ , ಅದೇ ರೀತಿ ನೆಲಮಹಡಿಯಲ್ಲಿ ವಿದ್ಯುತ್ ಗೀಜರ್ ಅಳವಡಿಸಿ ಬಿಸಿ ನೀರನ್ನು ಒದಗಿಸುವ ಕ್ರಮ ಕೈಗೊಳ್ಳಲು ಆಡಳಿತ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು .

RELATED ARTICLES  ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಈ ಬಗ್ಗೆ ಕೂಡಲೇ ಕ್ರಮ ವಹಿಸುವುದಾಗಿ ಆಡಳಿತ ವೈದ್ಯಾಧಿಕಾರಿಗಳು ಭರವಸೆ ನೀಡಿದರು .ನಂತರದಲ್ಲಿ ಹೊಸದಾಗಿ ಕಟ್ಟುತ್ತಿರುವ ಶಸ್ತ್ರಚಿಕಿತ್ಸಾ ಕಟ್ಟಡವನ್ನು ಪರಿಶೀಲಿಸಿದ ಶಾಸಕರು ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿದರು .

RELATED ARTICLES  ರಾಜಕೀಯ ನಿವೃತ್ತಿ ಘೋಷಿಸಿದ ಶಾರದಾ ಶೆಟ್ಟಿ.

ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಡಯಾಲಿಸಿಸ್ ಘಟಕಕ್ಕೆ ಜನರೇಟರ್ ಒದಗಿಸುವಂತೆ ಈ ಹಿಂದೆಯೇ ತಿಳಿಸಿದ್ದರೂ ಅದರ ಪೂರೈಕೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಫೋನ್ ಮೂಲಕ ಚರ್ಚಿಸಿದರು . ಆಸ್ಪತ್ರೆಯಲ್ಲಿ ಶುಚಿತ್ವ ಕಾದುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

ಈ ಸಂದರ್ಭದಲ್ಲಿ ಡಾ ಗಣೇಶ್, ಆರೋಗ್ಯ ಅಧಿಕಾರಿ ಡಾ ಆಜ್ಞಾ ನಾಯಕ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳಾದ ಡಾ ಶ್ರೀನಿವಾಸ್ ನಾಯಕ್, ಡಾಕ್ಟರ್ ಮಹೇಶ್ ಇದ್ದರು.