ಕುಮಟಾ: ಅತಿವೃಷ್ಟಿಯಿಂದ ಅಡಿಕೆಗೆ ಕೊಳೆ ರೋಗ ತಗುಲಿ ಬೆಳೆಗಾರರು ಕಂಗಾಲಾಗಿದ್ದಾರೆ,ಅಪಾರ ನಷ್ಟ ಅನುಭವಿಸುವಂತಾಗಿದೆ.ಇದರಿಂದಾಗಿ ಯೋಗ್ಯ ಪರಿಹಾರವನ್ನು ಸರಕಾರ ನೀಡಬೇಕಿದೆ . ಈ ಬಗ್ಗೆ ಸರಕಾರದ ಕಣ್ಣು ತೆರೆಸುವ ದೃಷ್ಟಿಯಿಂದ ಹಾಗೂ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಬೇಡವೆಂದು ವಿನಂತಿಸಲಾಯಿತು. ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಂತೇ ಉತ್ತರಕನ್ನಡದ ಕರಾವಳೀ ತಾಲೂಕು ಗಳಲ್ಲಿಯೂ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಹಾನಿಯಾಗಿದ್ದು ಶೀಘೃವಾಗಿ ಯೋಗ್ಯ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಕುಮಟಾ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

RELATED ARTICLES  ಸಿ.ಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿಶ್ವೇಶ್ವರ ಗೋಪಾಲ ಭಟ್ಟ

ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ದಿನಕರ ಶೆಟ್ಟಿಯವರು.ನಾನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಬಗ್ಗೆ ಅವರಿಗೆ ವಿವರಿಸುತ್ತೇನೆ.ಆದರೂ ನ್ಯಾಯ ಸಿಗದಿದ್ದಲ್ಲಿ ಬೆಳೆಗಾರರೊಂದಿಗೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಮಾಧ್ಯಮದ ಮೂಲಕ ತಿಳಿಸಿ ತಾವು ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಜೊತೆಗಿರುವುದಾಗಿ ತಿಳಿಸಿದರು.

RELATED ARTICLES  ವಿಷ್ಣುಗುಪ್ತ ವಿವಿವಿ ಗುರುಕುಲಕ್ಕೆ ಶೇ. 100 ಫಲಿತಾಂಶ

ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರರು ತಮ್ಮ ತಮ್ಮ ಅಡಿಕೆ ತೋಟದಲ್ಲಿ ಉದುರಿದ ಅಡಿಕೆಗಳನ್ನು ತಂದು ಪ್ರದರ್ಶಿಸಿ ತಮ್ಮ ನೋವನ್ನು ತೋಡಿಕೊಂಡರು.

ವರದಿ : ಜಯದೇವ ಬಳಗಂಡಿ,
9448302509.
“ಸತ್ವಾಧಾರಾ ನ್ಯೂಸ್”