ಬೆಂಗಳೂರು: ಗೋವುಗಳಿಗೆ ಸಹಜ ಜೀವನ ಕಲ್ಪಿಸುವ ಪರಿಕಲ್ಪನೆಯಲ್ಲಿ, ವಿಶಿಷ್ಟ ಗೋಧಾಮ “ಗೋಸ್ವರ್ಗ”ವನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪರಿಕಲ್ಪಿಸಿ, ಉತ್ತರಕನ್ನಡದ ಭಾನ್ಕುಳಿಯಲ್ಲಿ ಸಾಕಾರಗೊಳಿಸಿದ್ದು, ” ಗೋಸ್ವರ್ಗ”ದ ಕುರಿತಾದ ಸಂವಾದ ಕಾರ್ಯಕ್ರಮ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ಸಂಜೆ 5.00 ಗಂಟೆಗೆ ನಡೆಯಲಿದೆ.
ವಿಶಿಷ್ಟ ಪರಿಕಲ್ಪನೆಯ ಗೋಸ್ವರ್ಗದ ಕುರಿತಾದ ವಿಚಾರ ವಿನಿಮಯ ಕಾರ್ಯಕ್ರಮ “ಗೋಸ್ವರ್ಗ ಸಂವಾದ – ಗೋಸಂಪದ ಸಮರ್ಪಣೆ” ಕಾರ್ಯಕ್ರಮ ನಡೆಯಲಿದ್ದು, ಗೋಸ್ವರ್ಗದ ಕುರಿತಾಗಿ ಪರಮಪೂಜ್ಯ ಶ್ರೀಗಳು ಮಾಹಿತಿ ನೀಡಲಿದ್ದು, ಆನಂತರ ಆ ಕುರಿತಾಗಿ ಪ್ರಶ್ನೋತ್ತರಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್ ಗೌರವಾಧ್ಯಕ್ಷತೆ ವಹಿಸಲಿದ್ದು, ಕಾಡುಮಲ್ಲೇಶ್ವರ ವಾರ್ಡಿನ ಬಿಬಿಎಂಪಿ ಸದಸ್ಯರಾದ ಮಂಜುನಾಥ್ ರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಕಾರ್ಯಾಧ್ಯಕ್ಷರಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದಲ್ಲದೇ ಅನೇಕ ಗಣ್ಯ ಮಾನ್ಯರು, ಗೋಪ್ರೇಮಿಗಳು ಸ್ವರ್ಗ ಸಂವಾದ ಹಾಗೂ ಗೋಸಂಪದ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಎಂಬ ಪರಿಕಲ್ಪನೆಯಲ್ಲಿ ಗೋಸ್ವರ್ಗವನ್ನು ನಿರ್ಮಿಸಲಾಗಿದ್ದು, ಇಲ್ಲಿ ಗೋವುಗಳಿಗೆ ಯಾವುದೇ ಬಂಧನವಿಲ್ಲದೇ ಇಚ್ಚೆಗನುಸಾರ ಸಂಚರಿಸುವ , ನೆರಳು – ಬಿಸಿಲಿನಲ್ಲಿ ವಿಹರಿಸುವ ವ್ಯವಸ್ಥೆ ಮಾಡಲಾಗಿದ್ದು, 24/7 ನೀರು ಹಾಗೂ ಆಹಾರ ಲಭ್ಯವಿರುವಂತೆ ಮಾಡಲಾಗಿದ್ದು, ತಾಯಿಯೊಂದಿಗೆ ಕರುವಿರಲು ಅವಕಾಶ ಸೇರಿದಂತೆ ಗೋವುಗಳಿಗೆ ಸಹಜ ಜೀವನದ ಅವಕಾಶವನ್ನು ಕಲ್ಪಿಸಲಾಗಿದೆ. ಅತ್ಯಾಧುನಿಕ ಗೋಸಂಶೋಧನಾ ಕೇಂದ್ರ, ಚಿಕಿತ್ಸಾಲಯ ಹಾಗೂ ಗವ್ಯೋತ್ಪನ ತಯಾರಿಕಾ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಗೋಪ್ರೇಮಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯುವ ಸ್ವರ್ಗಸಂವಾದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು, ಗೋಸ್ವರ್ಗಕ್ಕೆ ಸೇವಾಕಾಣಿಕೆ ಸಲ್ಲಿಸಲು ಗೋಪ್ರೇಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಮಸ್ತ ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು ಮಾಹಿತಿಗಾಗಿ 9900795574, 9448076886 ಸಂಪರ್ಕಿಸಬಹುದಾಗಿದೆ. ಸ್ಥಳ: ಶ್ರೀಅಖಿಲ ಹವ್ಯಕ ಮಹಾಸಭಾ, 8ನೇ ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು. ಸಂಜೆ 5.00 ಗಂಟೆಗೆ