ಕುಮಟಾ: ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನ ನಡೆದಿದೆ .ನಿನ್ನೆ ತಡರಾತ್ರಿ ನಡೆದ ಕಳ್ಳತನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ ಎಂದು ವರದಿಯಾಗಿದೆ .
ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿದ್ದ ಎರಡು ಇನ್ವರ್ಟರ್ ಬ್ಯಾಟರಿ ,ಒಂದು ಕಂಪ್ಯೂಟರ್, ಹಾಗೂ ಕ್ಯಾಶ್ ಬಾಕ್ಸ್ ಎಗರಿಸಿದ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ . ಸೇವಾ ಸಹಕಾರಿ ಸಂಘದ ಕಿಡಕಿಯನ್ನು ಕೊರೆದು ಕಳ್ಳರು ಕನ್ನ ಹಾಕಿದ್ದಾರೆ ಎನ್ನಲಾಗಿದೆ. ಕಿಡಕಿಯ ಮೂಲಕ ಒಳ ಪ್ರವೇಶಿಸಿ ವಸ್ತುಗಳನ್ನು ಕದ್ದೊಯ್ದಿರುವ ಕಳ್ಳರು ಕಿಟಕಿಯ ಪಕ್ಕ ಗೋಡೆಯ ಕಲ್ಲುಗಳನ್ನು ಕಿತ್ತು ಒಳ ಪ್ರವೇಶಿಸದಂತೆ ಗೋಚರವಾಗಿದೆ .
ಕ್ಯಾಶ್ ಬಾಕ್ಸ್ ನಲ್ಲಿ ಸುಮಾರು 25 ರಿಂದ 28 ಸಾವಿರ ರೂಪಾಯಿ ನಗದು ಇತ್ತು ಎಂದು ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಪಟಗಾರ ಮಾಹಿತಿ ನೀಡಿದ್ದಾರೆ .
ಕುಮಟಾ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಮತ್ತೆ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದು ಜನ ಭಯಭೀತರಾಗಿದ್ದಾರೆ .
ಗ್ರಾಮೀಣ ಸಹಕಾರಿ ಸಂಘಕ್ಕೆ ಕಳ್ಳರು ಕನ್ನ ಹಾಕಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ .
ಈ ಕುರಿತಾಗಿ ಪೊಲೀಸ್ ತನಿಖೆಯ ನಂತರದಲ್ಲಿ ಪೂರ್ಣ ಮಾಹಿತಿ ಹೊರಬರಬೇಕಾಗಿದೆ .