ವರದಿ ; ಬೀಪ್ ಮಾರಾಟ ಹಾಗೂ ರಪ್ತಿನ ವಿಚಾರ ಈಗ ಬಹು ಚರ್ಚೆಯಾಗುತ್ತಿರುವ ವಿಚಾರ.
ಇಡೀ ವಿಶ್ವದಲ್ಲೇ ಅತೀ ಹೆಚ್ಚು ಬೀಫ್ ರಪ್ತು ಮಾಡುವ ದೇಶದಲ್ಲಿ ಭಾರತ ಇದೀಗ ಒಂದು ಸ್ಥಾನ ಹೆಚ್ಚು ಗಳಿಸುವ ಮೂಲಕ ಮೂರರಿಂದ ಎರಡನೇ ಸ್ಥಾನಕ್ಕೆ ಜಿಗಿಯುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಆಹಾರ (ಎಪ್ಸಿಒ) ಮತ್ತು ಕೃಷಿ ಸಂಘಟನೆ (ಎಪ್ಸಿಒ) ಹಾಗೂ ಆರ್ಥಿಕ ಸಹಾಯಕ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ವರದಿ ಪ್ರಕಟಿಸಿವೆ.

ಈಗಾಗಲೇ ಮೂರನೆಯ ಸ್ಥಾನದಲ್ಲಿರುವ ಭಾರತಕ್ಕೆ ಬೀಫ್ ರಫ್ತು ಮಾಡಲು ಜಾನುವಾರುಗಳ ಕೊರತೆ ಇದೆ ಎಂದು ಆ ವರದಿ ಹೇಳಿದೆ. ಎಪ್ಸಿಒ, ಒಇಸಿಡಿ 2017-2027ರ ವರೆಗಿನ ಮುನ್ನೋಟ ಕುರಿತ ವರದಿಯನ್ನು ಪ್ರಕಟಿಸಿದೆ.

RELATED ARTICLES  ನಗ್ನವಾಗಿ ಓಡಾಡಿ ಮುಜುಗರ ಉಂಟುಮಾಡುತ್ತಿದ್ದ ಮಾನಸಿಕ ಅಸ್ವಸ್ಥ : ಮಾನವೀಯತೆ ಮೆರೆದ ಪೊಲೀಸರು.

ಸಂಸ್ಥೆಯ ವರದಿಯ ಪ್ರಕಾರ ಬ್ರಝಿಲ್ ಹಾಗೂ ಆಸ್ಟ್ರೇಲಿಯಾ ಮೊದಲೆರಡು ಸ್ಥಾನದಲ್ಲಿವೆ. ಕಳೆದ ವರ್ಷ 15.6 ಲಕ್ಷ ಟನ್ನಷ್ಟು ಬೀಫ್ ಮಾಂಸವನ್ನು ರಪ್ತು ಮಾಡುವ ಮೂಲಕ ಭಾರತ ಮೂರನೇ ಸ್ಥಾನದಲ್ಲೇ ಇರಲಿದೆ. ಒಂದು ವೇಳೆ ದೇಶದಲ್ಲಿ ಗೋ ಮಾಂಸ ನಿಷೇಧವಾದರೆ ಬೀಫ್ ರಪ್ತಿನಲ್ಲಿ ಭಾರತ ಪ್ರಗತಿ ಕಾಣಲಿದೆ ಮತ್ತು ಭಾರತ ಒಂದೇ ಭಾರಿಗೆ ಒಂದು ಸ್ಥಾನವನ್ನು ಹೆಚ್ಚು ಗಳಿಸಲಿದೆ.ಒಂದು ವೇಳೆ ಇದೇ ರೀತಿಯಲ್ಲಿ ಮಾಂಸ ರಫ್ತು ಸಾಗಿದರೆ ಮೂರನೆಯ ಸ್ಥಾನದಲ್ಲೇ ಖಾಯಂ ಆಗಿ ಉಳಿಯಲಿದೆ ಎಂದು ಸಂಸ್ಥೆ ತಿಳಿಸಿದೆ.

RELATED ARTICLES  ಹಳಿ ತಪ್ಪಿದ ರೈಲು : ಹಲವು ರೈಲುಗಳ ಮಾರ್ಗ ಬದಲು

ಎಪ್ಸಿಒ, ಒಇಸಿಡಿ 2017-2027ರ ವರೆಗಿನ ಮುನ್ನೋಟ ಕುರಿತ ವರದಿ ಪ್ರಕಾರ ಭಾರತ 2026ರ ವೇಳೆಗೆ ಬೀಪ್ ರಪ್ತು ಅಭಿವೃದ್ಧಿಗೊಳ್ಳಲಿದ್ದು, 19.3 ಲಕ್ಷ ಟನ್ಗೆ ಹೆಚ್ಚಿಸಿಕೊಳ್ಳಲಿದೆ. ಈ ಪ್ರಮಾಣವು ವಿಶ್ವದ ಬೀಪ್ ರಪ್ತು ರಪ್ತಿನ ಶೇ.16ರಷ್ಟು ಆಗಲಿದೆ ಎಂದು ವರದಿ ಉಲ್ಲೇಖಿಸಿದೆ. ಒಇಸಿಡಿ ವರದಿ ಪ್ರಕಾರ, ಕಳೆದ ವರ್ಷ ಭಾರತ 3.63 ಲಕ್ಷ ಟನ್ನಷ್ಟು ಮಾಂಸವನ್ನು ರಫ್ತು ಮಾಡಿದೆ. 2016ರಲ್ಲಿ ವಿಶ್ವದ ಒಟ್ಟು ಬೀಪ್ ರಫ್ತು ಪ್ರಮಾಣ 1.95ಕೋಟಿ ಟನ್ನಷ್ಟಾಗಿತ್ತು. ಈ ಪ್ರಮಾಣ 2026ರ ವೇಳೆ 1.24ಕೋಟಿ ಟನ್ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಫ್ಸಿಒ ತಿಳಿಸಿದೆ.