ಹೊಸದಿಲ್ಲಿ: ಇಂಡೋನೇಷ್ಯಾದ ಎರಡು ನಗರಗಳಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಎಂಟನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ನಡೆದ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಭಾರತ ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿದೆ.

ಭಾರತದ ಫೌಹಾದ್ ಮಿರ್ಜಾ ಈಕ್ವೆಸ್ಟ್ರಿಯನ್‌ನ ವೈಯಕ್ತಿಕ ವಿಭಾಗದಲ್ಲಿ ಒಂದು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅಲ್ಲದೆ, ಇದೇ ಸ್ಪರ್ಧೆಯ ತಂಡದ ವಿಭಾಗದಲ್ಲೂ ಸಹ ಭಾರತ ಎರಡನೇ ಸ್ಥಾನ ಪಡೆದುಕೊಂಡಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

RELATED ARTICLES  ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ನಿಂದ ಯುವಕನ ಮೇಲೆ ಹಲ್ಲೆ! ಪಕ್ಷದಿಂದ ಉಚ್ಛಾಟನೆ.

ಇನ್ನು, ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್‌ನಲ್ಲಿ ಗೆದ್ದು ಸೆಮಿಫೈನಲ್ಸ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಸೈನಾ ನೆಹ್ವಾಲ್ ಖಚಿತಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಸೈನಾ ವಿಶ್ವದ ನಂ. 1 ಶ್ರೇಯಾಂಕಿತೆ ವಿರುದ್ಧ ಸೆಣಸಾಡಬೇಕಿದೆ. ಅಲ್ಲದೆ, ಪಿ.ವಿ.ಸಿಂಧೂ ಕೂಡ ಸೆಮೀಸ್‌ಗೆ ಎಂಟ್ರಿ ಕೊಟ್ಟಿದ್ದು, ಬ್ಯಾಡ್ಮಿಂಟನ್‌ನಲ್ಲಿ ಎರಡು ಪದಕ ಗ್ಯಾರಂಟಿಯಾಗಿದೆ. ಜತೆಗೆ ಆರ್ಚರಿಯಲ್ಲೂ ಭಾರತಕ್ಕೆ 1 ಪದಕ ಗ್ಯಾರಂಟಿಯಾಗಿದೆ.

RELATED ARTICLES  ಗೋಡೆ ಕುಸಿತ : ತಾಯಿ ಸೇರಿ ಇಬ್ಬರ ಮಕ್ಕಳ ಭೀಕರ ಸಾವು .