ಹೊನ್ನಾವರ: ಸರ್ಕಾರಿ ಪದವಿ ಪೂರ್ವ ಕಾಲೇಜು, ಇಡಗುಂಜಿ ಇವರ ನೇತೃತ್ವದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಮೈದಾನದಲ್ಲಿ ನಡೆದ ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಾಲಕರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ 13 ಚಿನ್ನದ ಪದಕ, 5 ಬೆಳ್ಳಿ ಪದಕ, 3 ಕಂಚಿನ ಪದಕ, ಟೆಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಾಂಪಿಯನ್ ಹಾಗೂ ಕಬಡ್ಡಿ, ವಾಲಿಬಾಲ್ ನಲ್ಲಿ ರನ್ನರ್ಸ್ ಆಗಿರುತ್ತಾರೆ.

RELATED ARTICLES  ಶ್ರೀ ಶಾಂತಿಕ ಪರಮೇಶ್ವರಿ ( S. P. T) ಕ್ರೀಡಾ ಬಳಗ ದಿವಗಿ ಇವರ ಸಂಯೋಜನೆಯಲ್ಲಿ ಯಶಸ್ವಿಯಾದ ಮ್ಯಾಟ್ ಕಬಡ್ಡಿ ಪಂದ್ಯಾವಳಿ

ಹಾಗೂ ಬಾಲಕಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ 10 ಚಿನ್ನದ ಪದಕ, 2 ಬೆಳ್ಳಿ ಪದಕ, 3 ಕಂಚಿನ ಪದಕ, ಚೆಸ್, ಟೆಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುತ್ತಾರೆ. ಆದರ್ಶ ಎನ್. ನಾಯ್ಕ ಹಾಗೂ ನೇತ್ರಾವತಿ ಎನ್. ಗೌಡ ಇವರು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆಯುವುದರ ಮೂಲಕ ತಾಲ್ಲೂಕಾ ಮಟ್ಟದಲ್ಲಿ ನಮ್ಮ ಮಹಾವಿದ್ಯಾಲಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

RELATED ARTICLES  ವಿಶಿಷ್ಟ ತ್ಯಾಗಹಬ್ಬ ಇಂದು

ಇವರ ಸಾಧನೆಗೆ ಕಾಲೇಜಿನ ಘನ ಆಡಳಿತ ಮಂಡಳಿ, ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಶ್ಲಾಘಿಸಿದ್ದಾರೆ.