ಕಾರವಾರ:- ನಗರಸಭಾ ಚುನಾಣೆಯ ರಂಗು ಕಾವೇರಿದ್ದು ಕಾರವಾರದಲ್ಲಿ ಬಿಜೆಪಿ ವತಿಯಿಂದ ಶಾಸಕಿ ರೂಪಾಲಿ ನಾಯ್ಕ ರವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಗೊಳಿಸಿದರು. ಕಾರವಾರ ನಗರ ವ್ಯಾಪ್ತಿಯ ಶಾಲೆಗಳ ನೀರು ,ಶೌಚಾಲಯ ,ಆಟದ ಮೈದಾನ ಅಭಿವೃದ್ಧಿ ,ಸ್ವಚ್ಛತೆ ಗೆ ಸಂಬಂಧಿಸಿದಂತೆ ಕೋಣೆನಾಲಾ ಕಾಲುವೆ ಸ್ವಚ್ಛಗೊಳಿಸಿ ಅದಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಚರಂಡಿ ವ್ಯವಸ್ಥೆ ಸರಿಪಡಿಸುವುದು ,ನಗರದಲ್ಲಿ ಹೆಚ್ಚಾಗುತ್ತಿರುವ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿ ವಾರ್ಡ ಗೆ ಫಾಗಿಂಗ್ ಮಿಷನ್ ಗಳನ್ನು ವದಗಿಸುವುದು ಇದಲ್ಲದೇ ಕೃಷಿ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಭಾಂಡಿಸಿಟ್ಟಾ ಮತ್ತು ಬಿಣಗಾದಲ್ಲಿ ಹಣ್ಣು ಹಂಪಲು ಮಾರುಕಟ್ಟೆ ಸ್ಥಾಪಿಸುವುದು ಇದಲ್ಲದೇ ನಂದನಗದ್ದಾ ಮೀನುಮಾರುಕಟ್ಟೆ ಯನ್ನು ಆಧುನಿಕರಣ ,ಕೋಡಿಬಾಗದ ಹಳೆ ಮೀನು ಮಾರುಕಟ್ಟೆ ಯಲ್ಲಿ ಮೀನು ಮಾರಾಟ ವ್ಯವಸ್ಥೆ ಸೇರಿದಂತೆ ಕ್ರೀಡೆ,ನಗರಾಭಿವೃದ್ಧಿ ಕುರಿತು ಪ್ರಣಾಳಿಕೆಯನ್ನು ಬಿಡುಗಡೆ ಗೊಳಿಸಲಾಯಿತು.
ಪ್ರಣಾಳಿಕೆ ಬಿಡುಗಡೆ ಮಾಡಿದ ಶಾಸಕಿ ರೂಪಾಲಿ ನಾಯ್ಕ ಕೋಣೆನಾಲಾ ಸೇರಿದಂತೆ ನಗರದ ಅಭಿವೃದ್ಧಿ ಗೆ ಕೆಲವು ಮುಖಂಡರು ಜನರಲ್ಲಿ ತಪ್ಪು ಮಾಹಿತಿ ನೀಡಿ ಜನರನ್ನು ಎತ್ತಿಕಟ್ಟುತಿದ್ದಾರೆ ಇದು ಸರಿಯಲ್ಲ ಇದರಿಂದಾಗಿ ಅಭಿವೃದ್ಧಿ ಕುಂಟಿತವಾಗಿತ್ತಿದೆ ಎಂದರು.
ಬಿಜೆಪಿ ಕಾರವಾರ ನಗರಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ವೇಳೆ ಬಿಜೆಪಿ ನಗರ ಅಧ್ಯಕ್ಷರಾದ ಮನೋಜ್ ಭಟ್,ಮಾಜಿ ನಗರಸಭಾ ಸದಸ್ಯ ಗಣಪತಿ ಉಳ್ವೇಕರ್. ನಾಗರಾಜ್ ನಾಯ್ಕ ,ಮಾಧ್ಯಮ ವಕ್ತಾರ ರಾಜೇಶ್ ಸೇರಿದಂತೆ ನಗರದ ಪ್ರಮುಖ ಮುಖಂಡರು ಇದ್ದರು.