ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖೆ, ಭಾರತ ವಿಕಾಸ ಪರಿಷತ್ ಭಟ್ಕಳ,ವೆಂಕಟೇಶ್ವರ ಯುವಕ ಸಂಘ ಆಸರಕೇರಿ, ಭುವನೇಶ್ವರಿ ಕನ್ನಡ ಸಂಘ ಆಸರಕೇರಿ, ಭಟ್ಕಳ ಕ್ರಿಯಾಶೀಲ ಗೆಳೆಯರ ಬಳಗ ಇವರ ಸಹಯೋಗದಲ್ಲಿ ವನಮಹೋತ್ಸವದ ಅಂಗವಾಗಿ “ಮನೆಗೊಂದು ಗಿಡ ಮನಸಿಗೊಂದು ಪುಸ್ತಕ” ಕಾರ್ಯಕ್ರಮವನ್ನು ದಿನಾಂಕ ೧೪.೦೭.೧೭ರ ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ನಿಶ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯದ ಆವರಣದಲ್ಲಿ ಗಿಡನೆಡುವ ಮೂಲಕ ಚಾಲನೆ ನೀಡಲಾಯಿತು. ನಂತರ ಆಸರಕೇರಿಯ ಮನೆ ಮನೆಗಳಿಗೆ ತೆರಳಿ ಮನೆಗೊಂದು ಗಿಡದ ಜೊತೆಗೆ ಪುಸ್ತಕವೊಂದನ್ನು ನೀಡಲಾಯಿತಲ್ಲದೇ ಗಿಡಮರಗಳ ಮಹತ್ವದ ಕುರಿತ ವಿವರ ಹಾಗೂ ಪುಸ್ತಕಗಳು ನಮ್ಮ ಬದುಕಿಗೇಕೆ ಬೇಕು ಎಂಬ ಸಾರವನ್ನು ತಿಳಿಸುವ ನಾಡಿನ ಹಿರಿಯ ಸಾಹಿತಿ ವಿ.ಗ.ನಾಯಕರ “ಪುಸ್ತಕ ಪ್ರೀತಿ” ಲೇಖನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಗೌರವ ಸಲಹೆಗಾರರು, ನಿಶ್ಚಲ ಮಕ್ಕಿ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಮ್.‌ಆರ್.ನಾಯ್ಕ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ವೀರೇಂದ್ರ ಶಾನಭಾಗ್, ಕಸಾಪ ಗೌರವ ಸಲಹೆಗಾರರಾದ ಅನಂತ ನಾಯ್ಕ ಉಗ್ರಾಣಿಮನೆ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಫಾರೆಸ್ಟರ್ ರವಿ, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ಮನೋಜ್ ನಾಯ್ಕ,
ಕಾರ್ಯದರ್ಶಿ ಪಾಂಡು ನಾಯ್ಕ, ಭಟ್ಕಳ ಅರ್ಬನ್ ಬ್ಯಾಂಕ ನಿರ್ದೇಶಕ ಶ್ರೀಧರ್ ನಾಯ್ಕ ಆಸರಕೇರಿ, ಕಸಾಪ ಗೌರವ ಕಾರ್ಯದರ್ಶಿ ಎಮ್.ಪಿ.ಬಂಢಾರಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶಿರಾಲಿ,ಸದಸ್ಯರಾದ ಸಂತೋಷ್ ಆಚಾರ್ಯ ನಿತ್ಯಾನಂದ ಭಟ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕಆಸರಕೇರಿ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ್, ವೆಂಕಟೇಶ್ ಮೊಗೇರ್ ಜಂಬರಮಠ, ಎಮ್.ಎಸ್.ನಾಯ್ಕ ಮಣ್ಕುಳಿ, ಭಟ್ಕಳ ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರುಗಳು, ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  ಕೋಟಿ ತೀರ್ಥದಲ್ಲಿ ಈಜಲು ತೆರಳಿದ ವ್ಯಕ್ತಿ ಸಾವು