ಜಕಾರ್ತ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ತಂಡ ಟೇಬಲ್ ಟೆನ್ನಿಸ್ ನಲ್ಲಿ ಮೊದಲ ಬಾರಿ ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ.
ಸೆಮಿಫೈನಲ್ ನಲ್ಲಿ ಇಂದು ದಕ್ಷಿಣ ಕೊರಿಯಾ ವಿರುದ್ಧ 0-3 ಅಂತರದಿಂದ ಭಾರತದ ತಂಡ ಸೋಲು ಅನುಭವಿಸಿತು.
ಜಪಾನ್ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ 1-3ರಿಂದ ಭರ್ಜರಿ ಜಯಗಳಿಸುವ ಮೂಲಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿತ್ತು ಎಂದು ವರದಿಯಾಗಿದೆ.
ಪುರುಷರ ವಿಭಾಗದ ಹಾಕಿ ತಂಡ ಮತ್ತೊಂದು ಸಾಧನೆ ಮಾಡಿದೆ. ಶ್ರೀಲಂಕಾ ವಿರುದ್ಧ 20-೦ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಭಾರತೀಯ ತಂಡ ಸೆಮಿ ಫೈನಲ್ಸ್ ನಲ್ಲಿ ಮಲೇಷ್ಯಾ ವಿರುದ್ಧ ಸೆಣೆಸಲಿದೆ.
ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿಸಿ ಸಿಂಧು ಅವರು ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.