ಕಾರವಾರ :ಇಂದಿನ ವಿದ್ಯಾರ್ಥಿಗಳಲ್ಲಿ ವಿಜ್ಙಾನ ಕ್ಷೇತ್ರದ ಕುರಿತು ಕುತೂಹಲ,ಆಸಕ್ತಿಯನ್ನು ಉತ್ತೇಜಿಸುವುದು ಈ ಪ್ರಯೋಗಾಲಯದ ಮುಖ್ಯ ಆಶಯವಾಗಿದ್ದು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ದಿಂದ ಸಿಕ್ಕ ಈ ಅವಕಾಶವನ್ನು ಸದುಪಯೋಪಡಿಸಿಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಜಿ.ನಾಯಕ ಅಭಿಪ್ರಾಯ ಪಟ್ಟರು.ಅವರು ಕಾರವಾರದ ಪ್ರತಿಷ್ಠಿತ ಕಾರವಾರ ಎಜುಕೇಶನ್ ಸೊಸೈಟಿಯ ಹಿಂದೂ ಹೈಸ್ಕೂಲ್ ನಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ “ಅಟಲ್ ಟಿಂಕರಿಂಗ್ ಲ್ಯಾಬ್ ” ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರವಾರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಹಿರಿಯ ನ್ಯಾಯವಾದಿ ಎಸ್.ಪಿ.ಕಾಮತ್ ರವರು ಈ ನಮ್ಮ ಹಿಂದು ಹೈಸ್ಕೂಲ್ ನಲ್ಲಿರುವ ಮೂಲಭೂತ ಸೌಕರ್ಯ,ಚಟುವಟಿಕೆ,ಶೈಕ್ಷಣಿಕ ಸಾಧನೆ ಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೀತಿ ಆಯೋಗವು ಅಟಲ್ ಇನ್ನೋವೇಷನ್ ಮಿಷನ್ ಅಡಿಯಲ್ಲಿ ಈ ಯೋಜನೆಗಾಗಿ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತ,ವಿದ್ಯಾರ್ಥಿಗಳು ವೈಜ್ಙಾನಿಕ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ದೇಶಕ್ಕೆ ವೈಜ್ಙಾನಿಕ ಕೊಡುಗೆ ನೀಡಬೇಕೆಂದು ಕರೆ ಕೊಟ್ಟ ರು.
ವೇದಿಕೆಯಲ್ಲಿ ಕಾರ್ಯದರ್ಶಿ ಅನಿರುದ್ಧ ಹಳದಿಪುರ,ನಿವೃತ್ತ ಮುಖ್ಯಾಧ್ಯಾಪಕ ಎಸ್.ಎಸ್.ಕುಲಕರ್ಣಿ,ಆಡಳಿತಾಧಿಕಾರಿ ಜಿ.ಪಿ.ಕಾಮತ,ಹಿಂದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ಪಿ.ರಾಣೆ,ಶ್ರೀಮತಿ ಸುಮತಿ ದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಜಿ.ಎನ್.ಬಂಟ,ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕ ಅರುಣ ಪಿ.ರಾಣೆ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು.ಶಿಕ್ಷಕ ಸಂತೋಷ ಎಂ.ಶೇಟ್ ಅತಿಥಿಗಳ ಪರಿಚಯಿಸಿದರು.ವಿಜ್ಙಾನ ಶಿಕ್ಷಕರುಗಳಾದ ಆರ್.ವಿ.ದೇಶಭಂಡಾರಿ,
ನಿತ್ಯಾನಂದ ವಿ.ಕುರ್ಲೆ ಮಾರ್ಗದರ್ಶಿಸಿದರು.ಶಿಕ್ಷಕಿ ಭವಾನಿ ಹೆಗಡೆ ವಂದಿಸಿದರು.
– ಜಯದೇವ ಬಳಗಂಡಿ
ಸತ್ವಾಧಾರಾ ನ್ಯೂಸ್.
9448302509.