ಕಾರವಾರ : ಉತ್ತರಕನ್ನಡ ಜಿಲ್ಲಾಪಂಚಾಯತ್ ಸಂಭಾಂಣದಲ್ಲಿ ಇಂದು ಜಿಲ್ಲಾಪಂಚಾಯತ್ ಸಾಮಾನ್ಯಸಭೆ ನಡೆಯಿತು. ಜಿಲ್ಲೆಯ ಜಿ.ಪಂ ಸದಸ್ಯರು ತಮ್ಮತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಜಿ.ಪಂ ಅಧ್ಯಕ್ಷರ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಪುಷ್ಪಾ ನಾಯ್ಕ್ ಮಾತನಾಡಿ ” ಜಿಲ್ಲೆಯಲ್ಲಿ ಅನೇಕ ಮಣ್ಣಿನ ಗೋಡೆಯ ಪ್ರಾಥಮಿಕ ಶಾಲೆಗಳಿದ್ದು ಮಕ್ಕಳು ಭಯದ ನೆರಳಲ್ಲಿ ವಿಧ್ಯಾಬ್ಯಾಸ ಮಾಡುತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದರು”.

RELATED ARTICLES  ಇಂದು ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಕೊರೋನಾ ಪ್ರಕರಣ : ಉ.ಕ ದಲ್ಲಿ 100 ಕ್ಕೇರಿದ ಕೊರೋನಾ ಸೋಂಕಿತರು

ಶಾಲೆಯ ಕಟ್ಟಡ ದುಸ್ತಿತಿಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಕರಿಗೆ ಮಿರ್ಜಾನ್ ಜಿ.ಪಂ ಸದಸ್ಯ ಪ್ರದೀಪ್ ನಾಯಕ್ ಹಾಗೂ ಜಗದೀಶ್ ನಾಯಕ ಅವರು ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ಜಿಲ್ಲಾಪಂಚಾಯತ್ ವತಿಯಿಂದ ಶಿಕ್ಷಣ ಸಚಿವರ ಭೇಟಿಯಾಗಲು ನಿಯೋಗವೊಂದನ್ನು ರಚಿಸಲು ತೀರ್ಮಾನಿಸಲಾಯಿತು.

RELATED ARTICLES  ಜಿಲ್ಲೆಗೆ ಐದನೇ ಸ್ಥಾನ, ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸರಸ್ವತಿ ಪಿ.ಯು ಕಾಲೇಜಿನ ಹೇಮಾ ನಾಯಕ