ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ಎಂ.ಪಿ,ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ, ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ ಯಶಸ್ಸು ಎಂಬ ಶೀರ್ಷಿಕೆಯೊಂದಿಗೆ ವ್ಯಕ್ತಿತ್ವ ವಿಕಸನ ಉಪನ್ಯಾಸ ನಡೆಯಿತು.

ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಇವರು ಉಪನ್ಯಾಸ ನೀಡುತ್ತ ವ್ಯಕ್ತಿತ್ವಕ್ಕೆ ಶೋಭೆ ಮೌಲ್ಯಗಳಿಂದ ಸಾಧ್ಯ ಮೋಹವನ್ನು ತ್ಯಜಿಸಿ ಜೀವÀನದಲ್ಲಿ ಶಿಸ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕಿದೆ ಆಗ ನೆಮ್ಮದಿ ಸಿಗಲು ಸಾಧ್ಯ ಎಂದರು. ಹೊನ್ನಾವರದ ಸೇವಾ ಕೇಂದ್ರದ ಬ್ರಹ್ಮಕುಮಾರಿ ಉಷಾ ಮಾತನಾಡಿ ಬದ್ಧತೆಯಿಂದ ಬದುಕು ನಡೆಸಲು ಬೇಕಾದ ಸಂಗತಿಗಳ ಕುರಿತು ಬೆಳಕು ಚೆಲ್ಲಿದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮೀ ನಾಯ್ಕ ಸಭಾಧ್ಯಕ್ಷತೆ ವಹಿಸಿದರು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಚ್.ಭಟ, ಬ್ರಹ್ಮಕುಮಾರಿ ಕನಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಚಿತ್ರಕಲೆಯಲ್ಲಿ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ.

ಉಪನ್ಯಾಸಕರಾದ ವಿನಾಯಕ ಭಟ್ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾಧರ ಕಡತೋಕಾ ಕಾರ್ಯಕ್ರಮವನ್ನು ನಿರ್ವಹಿಸಿದರು.