ಶ್ರೀನಗರ : ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂದು ಬೆಳಗ್ಗೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ನ ಮಗ ಶಕೀಲ್ ನನ್ನು ನಿವಾಸದಲ್ಲಿ ಬಂಧಿಸಿದೆ ಎಂದು ವರದಿ ಮೂಲಗಳಿಂದ ತಿಳಿದುಬಂದಿದೆ.
ಸಂವಿಧಾನದ 35ಎ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿರುವುದರ ವಿರುದ್ಧ ಕಾಶ್ಮೀರದ ಪ್ರತ್ಯೇಕತಾವಾದಿಗಳು ಬಂದ್ ಕರೆ ನೀಡಿದೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆಗಳನ್ನು ತಡೆಯಲು ನಿರ್ಬಂಧಕಾಜ್ಞೆ ವಿಧಿಸಲಾಗಿದೆ. ಪ್ರತ್ಯೇಕತಾವಾದಿಗಳ ಬಂದ್ ಕರೆಯ ಪ್ರಯುಕ್ತ ಇಂದು ಕಾಶ್ಮೀರ ಕಣಿವೆಯಲ್ಲಿ ಜನಜೀವನ ಬಹುತೇಕ ನಿಲುಗಡೆಗೆ ಬಂದಿದೆ.
ಆದರೆ ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿ ಬಂದಿಲ್ಲ.
ಮುಹಮ್ಮದ್ ಯಾಸಿನ್ ಮಲಿಕ್ ಮತ್ತು ಸಯ್ಯದ್ ಅಲಿ ಗೀಲಾನಿ, ಮೀರ್ ವೇಜ್ ಉಮರ್ ಫಾರೂಕ್ ನೇತೃತ್ವದ ಜಂಟಿ ಪ್ರತಿರೋಧ ಸಂಘಟನೆ ಆಗಸ್ಟ್ 30 ಮತ್ತು 31ರಂದು ಕಾಶ್ಮೀರ ಬಂದ್ ಗೆ ಕರೆ ನೀಡಿದೆ.