ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುವ ಕಷಾಯ, ಸೂಪ್ ಕುಡಿಯಿರಿ. ಸ್ನಾನ ಮಾಡುವಾಗ ಕೂಡ ಒಂದೆರಡು ಹನಿ ನೀಲಗಿರಿ ತೈಲವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.
• ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು 1 ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.
• ಬಿಸಿಯಾದ ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
• ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿಮಾಡಿ ದಿನಕ್ಕೆ ೩ ಸಲ ಅರ್ಧ ಟೀ ಚಮಚ ತಿಂದರೆ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
• ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆದು ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
• ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ ಕುಡಿದರೆ ನೆಗಡಿ, ಕೆಮ್ಮು, ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.
• ಒಂದು ಚಿಟಕೆ ಅರಿಶಿನಪುಡಿ ಮತ್ತು ಎರಡು ಚಿಟಕೆ ಕಾಳು ಮೆಣಸಿನಪುಡಿಯನ್ನು ಒಂದು ಬಟ್ಟಲು ಹಾಲಿಗೆ ಹಾಕ್ಕಿ ಚೆನ್ನಾಗಿ ಕುದಿಸಿ ಊಟವಾದ ನಂತರ ರಾತ್ರಿ ಮೂರು ದಿನ ಸೇವಿಸಿದರೆ ಜಾಡ್ಯ ಪರಿಹಾರವಾಗುವದರ ಜೊತೆಗೆ ನೆಗಡಿ, ಕೆಮ್ಮು ದೂರವಾಗುತ್ತದೆ.
• ಮೆಣಸನ್ನು ಹುರಿದು ನುಣ್ಣಗೆ ಪುಡಿಮಾಡಿ ಕಾಲು ಚಮಚ ಪುಡಿಯನ್ನು ಜೇನುತುಪ್ಪ ದಲ್ಲಿ ಕಲಸಿ ದಿನಕ್ಕೆ 2 ಸಲ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಗುಣವಾಗುತ್ತದೆ.
• ಒಡೆದ ಮೆಣಸು ಸ್ವಲ್ಪ ಓಮು ಮತ್ತು ಒಂದೆರಡು ಉಪ್ಪಿನ ಹರಳುಗಳನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ನುಂಗುತ್ತಿದ್ದರೆ ಕೆಮ್ಮು ದೂರವಾಗುತ್ತದೆ.
• ಒಂದು ಬಟ್ಟಲು ನೀರಿಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ಒಂದು ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಕುದಿಸಿ ಈ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಸಾರಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುತ್ತದೆ.
• ಒಂದು ವೀಲ್ಯದೆಲೆಯೊಂದಿಗೆ ನಾಲ್ಕೈದು ಕಾಳು ಮೆಣಸು ಮತ್ತು ಒಂದೆರಡು ಹರಳು ಉಪ್ಪು ಹಾಕಿಕೊಂಡು ಜಗಿದು ತಿನ್ನುವುದರಿಂದ ಕಫಾ ಹೋಗುತ್ತದೆ.
• ಓಮು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರೂ ಸಾರಿ ಕುಡಿದರೆ ಕಫಾ ನಿವಾರಣೆಯಗುತದೆ.
• ಒಂದು ಬಟ್ಟಲು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿಶುಂಟಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಕುಡಿದರೆ ಕಫಾ ಬಿಡುಗಡೆಯಾಗುತ್ತದೆ. ಕೆಮ್ಮು, ಕ್ಷಯ ರೋಗಗಳಿಗೆಲ್ಲ ಈ ಉಪಚಾರದಿಂದ ಉತ್ತಮ ಪರಿಹಾರ ದೊರೆಯುವದು.
• ಹಸಿ ಶುಂಟಿಯ ಕಷಾಯಕ್ಕೆ ಮೆಂತ್ಯದ ಸೊಪ್ಪಿನ ಕಷಾಯವನ್ನು ಬೆರೆಸಿ ಜೇನುತುಪ್ಪದೊಂದಿಗೆ ಕುಡಿಯುವದರಿಂದ ಕಫಾ ನಿವಾರಣೆಯಾಗುವುದು.