ಜಕಾರ್ತ: 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದೆ. ವಿವಿಧ ವಿಭಾಗಗಳಲ್ಲಿ ಇಂದು ಕೂಡ ಭಾರತದ ಅಥ್ಲೇಟ್ ಗಳು ತಮ್ಮ ಸಾಮರ್ಥ್ಯ ತೋರಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ ವಿಭಾಗದ 4×400 ರಿಲೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ನಮ್ಮ ಕನ್ನಡತಿ ಪೂವಮ್ಮ, ಹಿಮಾದಾಸ್, ಎಸ್ಎಲ್ ಗಾಯಕ್ವಾಡ್ ಹಾಗೂ ವಿ ಕೊರೊತಾ ಕೇವಲ 3:28:72 ನಿಮಿಷದಲ್ಲಿ ಮಿಂಚಿನ ಓಟ ಓಡಿ ಸತತ ಐದನೇ ಸಲ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.
ಪುರುಷರ 4×400 ರಿಲೆಯಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಿಂದ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, 13 ಚಿನ್ನ, 21 ಬೆಳ್ಳಿ ಹಾಗೂ 25 ಕಂಚಿನೊಂದಿಗೆ 59 ಪದಕ ಬಾಚಿಕೊಂಡಿದೆ ಎಂದು ವರದಿಯಾಗಿದೆ.