ಕುಮಟಾ: ಗೋಕರ್ಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಸರಕಾರಿ ಪ್ರೌಢಶಾಲೆ ನಾಡುಮಾಸ್ಕೇರಿಯಲ್ಲಿ ನಡೆಯಿತು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿದ್ಯಾರ್ಥಿಗಳು ನಾಡುಮಾಸ್ಕೇರಿ ಹೈಸ್ಕೂಲಿನಲ್ಲಿ ನಡೆದ ಗೋಕರ್ಣ ವಲಯ ಮಟ್ಟದ ಪ್ರತಿಭಾಕಾರಂಜಿಯಲ್ಲಿ ನಡೆದ ಚರ್ಚಾಸ್ಪರ್ಧೆ,ಆಶುಭಾಷಣ ಸ್ಪರ್ಧೆ, ಇಂಗ್ಲೀಷ ಭಾಷಣ ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿ ವೆಂಕಟೇಶ ಜೆ.ಪಟಗಾರ ಪ್ರಥಮ ಸ್ಥಾನ ರಂಗೋಲಿ ಸ್ಪರ್ಧೆಯಲ್ಲಿ ಶಶಿ ಪಟಗಾರ ಪ್ರಥಮಸ್ಥಾನ, ಸಂಸ್ಕøತ ಭಾಷಣದಲ್ಲಿ ಶ್ರೀದೇವಿ ಹಳ್ಳೇರ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ಶ್ವೇತಾ ಸಂಗಡಿಗರು ದ್ವೀತಿಯ ಸ್ಥಾನ ಪಡೆದಿದ್ದಾರೆ.

RELATED ARTICLES  "ಕಾಲೇಜು ವಿದ್ಯಾರ್ಥಿ ಪ್ರಜ್ವಲ್ ಶೇಟರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಿಗೆ ಮನವಿ."

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಞರಾದ ಹೊನ್ನಪ್ಪ ನಾಯಕ,ಕಾರ್ಯದರ್ಶಿ ಮೋಹನ ಕೆರೆಮನೆ, ಸದಸ್ಯರು, ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ, ಶಿಕ್ಷಕ ವೃಂದದವರು, ಆಶ್ರಯ ಪೌಂಡೇಶನ್‍ನ ಅಧ್ಯಕ್ಷರಾದ ರಾಜೀವ ಗಾಂವಕರ, ಗ್ರಾಮ ಪಂಚಾಯತ ಅಧ್ಯಕ್ಷರು,ಯುವಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಊರನಾಗರಿಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ ಇವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

RELATED ARTICLES  ವಿಧಾತ್ರಿ ಅಕಾಡೆಮಿ ಸಹಯೋಗದೊಂದಿಗೆ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿನಿ AME CET ಪರೀಕ್ಷೆಯಲ್ಲಿ ಉತ್ತಮ ಸಾಧನೆ.

ವರದಿ: ಎನ್. ರಾಮು ಹಿರೇಗುತ್ತಿ