ಕಾರವಾರ: ಕಾರವಾರ ತಾಲೂಕಿನ ಕದ್ರಾ ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.

ನಿನ್ನೆಯಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಬೆಳಿಗ್ಗೆ ಕಾರವಾರದಿಂದ ಕದ್ರಾ ಕಡೆಗೆ ತೆರಳುವ ಮಾರ್ಗದಲ್ಲಿ ಮರಬಿದ್ದಿತ್ತು. ಮರಬಿದ್ದ ಪರಿಣಾಮ ಎರಡು ಕಡೆ ವಾಹನ ತೆರಳಲಾಗದೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.

RELATED ARTICLES  ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದ ಪರಿಹಾರ ವಿತರಿಸಿದ ಶಾಸಕ ಸುನೀಲ್ ನಾಯ್ಕ.

ಬೆಳಗ್ಗೆ ೯ ಘಂಟೆ ವೇಳೆಗೆ ಘಟನೆ ನಡೆದಿದ್ದರಿಂದ ಎರಡು ಕಡೆ ಸರ್ಕಾರಿ ಬಸ್ಸು ತೆರಳಲಾಗದೆ ನಿಂತ ಪರಿಣಾಮ ತೊಂದರೆಗೆ ಸಿಲುಕಿದ್ದರು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಜನಶಕ್ತಿ ವೇದಿಕೆಯ ಮಾಧವ ನಾಯಕ ಪ್ರಯಾಣಿಕರ ನೆರವಿಗೆ ಬಂದರು‌

ತಕ್ಷಣ ಕಾರವಾರ ಡಿಪ್ಪೋ ಮ್ಯಾನೇಜರ್ ಗಮನಕ್ಕೆ ಮಾಧವ ನಾಯಕ ಕರೆ ಮಾಡಿ ತಿಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು.

RELATED ARTICLES  ಉತ್ತರಕನ್ನಡದಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ.

ಮರವನ್ನ ತೆರವುವಗೊಳಿಸಲು ತಡವಾಗುವ ಹಿನ್ನಲೆಯಲ್ಲಿ ಕಾರವಾರದಿಂದ ಕದ್ರಾಕ್ಕೆ ತೆರಳಬೇಕಿದ್ದ ಬಸ್ಸು ವಾಪಾಸ್ ಕದ್ರಾ ಕಡೆ, ಕದ್ರಾದಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್ಸು ವಾಪಾಸ್ ಕಾರವಾರ ಕಡೆಗೆ ತೆರಳಿದ್ದ ಪರಿಣಾಮ ಎರಡು ಕಡೆಯ ಬಸ್ಸಿನ ಪ್ರಯಾಣಿಕರು ಅದಲು ಬದಲಾಗಿ ತಮ್ಮ ತಮ್ಮ ಕೆಲಸಕ್ಕೆ ತೆರಳಿದರು.