ನಿದ್ದೆ ಬರೋಕೆ ನಿರಾಳರಗೊದೆ ಮದ್ದು.-ಆದರೂ ಕೆಲವೊಮ್ಮೆ ಹಲವಾರು ಕಾರಣಗಳಿಂದ ನಿದ್ದೆ ನಮ್ಮಿಂದ ಮುನಿದು ಕೊಳ್ಳುತ್ತದೆ.ಆತಂಕ ಒತ್ತಡಗಳು ಇದಕ್ಕೆ ಮುಖ್ಯ ಕಾರಣ..ಅತಿಯಾದ ಸುಸ್ತು ಕೂಡ ಕೆಲವೊಮ್ಮೆ ನಿದ್ರಾ ಹೀನತೆಗೆ ಕಾರಣವಾಗುತ್ತದೆ..ಕಾಫಿ ಸೇವನೆ ಕಡಿಮೆ ಮಾಡಿ.ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಚಿಟಿಗೆ ಜಾಯಿಕಾಯಿ ಪುಡಿ ಬೆರೆಸಿ ಕುಡಿಯಬಹುದು.ನೆಲ್ಲಿಕಾಯಿ ಎಣ್ಣೆ…ಅಥವಾ ಹಾಲುಸೊರೆಕಾಯಿ ಎಣ್ಣೆಯನ್ನು ನೆತ್ತಿಯಮೇಲೆ ಹಿತವಾಗಿ ತಟ್ಟಿದರು ನಿದ್ದೆ ಬರುತ್ತದೆ.
ನಿದ್ದೆ ಮಾಡುವ ಮುನ್ನ ಸುಂದರ ಕಲ್ಪನೇ ಯೊಂದನ್ನು ಹೆಣೆಯುತ್ತ ..ಕಣ್ಮುಚ್ಚಿ ..ಮತ್ತು ಅದರ ಸುತ್ತ ಯೋಚಿಸಿ…..ಆಗಲೂ ಒಳ್ಳೆಯ ನಿದ್ದೆ ಬರುತ್ತದೆ.
ಒಂದು ಹಾಲಿಗೆ ಒಂದು ಚಮಚ ಜೇನು ಬೆರಸಿ ಕುಡಿದು ಮಲಗಿ …ಒಳ್ಳೆ ನಿದ್ದೆ ಬರತ್ತೆ.
ಗಸಗಸೆ …ಕೆಂಪು ಕಲ್ಲುಸಕ್ಕರೆ …ಏಲಕ್ಕಿ ..ಕುಟ್ಟಿ ಇಟ್ಟುಕೊಳ್ಳಿ ..ದಿನ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಬೆರಸಿ ಕುಡಿವಿರಿ…ಆಮೇಲೆ ನೋಡಿ ನಿದ್ದೆ ಹೇಗೆ ಬರತ್ತೆ ಅಂತ.
ಅನಿದ್ರೆ ಅಥವಾ ನಿದ್ರಾಹೆನತೆ ಬಹಳಷ್ಟು ಜನರನ್ನು ಕಾಡುವ ಸಮಸ್ಯೆ.. ಆದರೆ ನಿದ್ರಾಹೀನತೆ ಅಲ್ಲ. …ಜಾಸ್ತಿ ನಿದ್ದೆ. ಈಗ ವಯಸ್ಸಿಗೆ ಅನುಗುಣವಾಗಿ ಸ್ವಲ್ಪ ಬದಲಾವಣೆ ಆಗಿದೆ. ಹಗಲಿಗೆ ಒಳ್ಳೆಯ ನಿದ್ದೆ, ರಾತ್ರಿ ಜಾಗರಣೆ.
1. ಬೆಳಿಗ್ಗೆ ಸ್ನಾನ ಮಾಡುವವರು ಸಂಜೆಯೂ ಸ್ನಾನ ಮಾಡಿ ನೋಡಿ.
2. ಸ್ನಾನ ಮಾಡುವ ಘಂಟೆಗೆ ಮುಂಚೆ ತಲೆಗೆ ಎಣ್ಣೆಯನ್ನು ಚೆನ್ನಾಗಿ ತಟ್ಟಿ ನಿಮ್ಮ ಕೈಯಿಂದಲೇ ಮಸಾಜ್ ಮಾಡಿಕೊಳ್ಳೀ. ಯಾವುದಾದರು
ಎಣ್ಣೆ ಆದರೆ ಒಳ್ಳೆಯದು.
3. ವಾರಕ್ಕೊಮ್ಮೆ ಗಸಗಸೆ ಪಾಯಸ ಒಂದು ಲೋಟದಷ್ಟನ್ನು ಕುಡಿದರೆ ನಿದ್ದೆ ಒಳ್ಳೆಯದಾಅಗಿ ಬರುತ್ತದೆ.
4. ಅನುಕೂಲವಾದರೆ ಮನೆಯಲ್ಲೇ ಎಣ್ಣೆ ಮಾಡಿ ಕೊಳ್ಳಬಹುದು. ನೆಲ್ಲಿಕಾಯಿ, (ಒಣಗಿಸಿದ್ದು), ಒಂದೆಲಗ, ದುರ್ವೆ ಹುಲ್ಲು(ಗರಿಕೆ) ಎಳ್ಳೆಣ್ಣೆ , ಸ್ವಲ್ಪ ಮೆಂತ್ಯ ಹಾಗು ಸ್ವಲ್ಪ ಲಿಂಬೆರಸ ಹಾಗು ಸಿಕ್ಕಿದರೆ ಕುಂಬಳಕಾಅಯಿ, ಮೆಲಿನ ಎಲ್ಲಾ ಸಾಮಗ್ರಿ, (ಎಣ್ಣೆ ಬಿಟ್ಟು) ರಸ ತೆಗೆದುಕೊಳ್ಳಿ ಮೊದಲು ದಪ್ಪರಸ ನಂತರ ಸ್ವಲ್ಪ ನೀರು ಹಾಕಿ ರಸ ತೆಗೆದು ಸ್ಟವ್ ಮೇಲೆ ಬಿಸಿ ಮಾಡಿ. ಅದಕ್ಕೆ ಸ್ವಲ್ಪ ಸಮಯದ ನಂತರ ಎಣ್ಣೆಯನ್ನು ಸೇರಿಸಿ. ಎಣ್ಣೆ ಕುದಿದು ಕಡಿಮೆಯಾದಾಗ ಅದಕ್ಕೆ ಒಂದು ನಿಂಬೆ ಹೋಳನ್ನು ಸೇರಿಸಿ. ಹೋಳಿನ ಸಿಪ್ಪೆ ಗರಿಗರಿಯಾಅದಗ ಎಣ್ಣೆ ತಯಾರಾಅದ ಹಾಗೆ. ತಣ್ಣಗಾದ ಮೇಲೆ ಬಾಟ್ಲಿಯಲ್ಲಿ ಹಾಕಿಡಿ. ತಳದಲ್ಲಿ ನಿಂತ ಚರಟವನ್ನು ಬಿಸಾಡಬೆಡಿ. ರವಿವಾರ ಸ್ನಾನಕ್ಕೆ ಮುಂಚೆ ಮೈಗೆ ತಿಕ್ಕಿ ಮಜವಾಗಿ ಸ್ನಾನ ಮಾಡಿ.
5. ಸಾಯಂಕಾಲ ಸ್ವಲ್ಪ ತಿರುಗಾಡಿ. ಅಂದರೆ ವಾಕ್ ಮಾಡಿ.
6. ರಾತ್ರಿ ಮಲಗುವ ಮುಂಚೆ ಒಂದು ಲೋಟ ಬೆಚ್ಚಗಿನ ಹಾಲು ಕುಡೀರಿ.
7.ನಿದ್ರಾಹೀನತೆಯ ತೊಂದರೆಯಿರುವವರು ರಾತ್ರಿ ಸಮಯಸೂರ್ಯಕಾಂತಿ ಸೊಪ್ಪಿನ ಸಾರನ್ನು ಸೇವಿಸಿದರೆ ಒಳ್ಳೆ ನಿದ್ರೆಬರುತ್ತದೆ.
8. ಮಲ್ಲಿಗೆ ಎಣ್ಣೆಯನ್ನು ಮಸಾಜ್ ಮಾಡಿ. ಸ್ವಲ್ಪ ಮಲ್ಲಿಗೆಯನ್ನು ತಲೆಯ ಹತ್ತಿರ ಇಟ್ಟು ಮಲಗಿದರೆ ಅದರ ಸುವಾಸನೆಯಿಂದ ಬೇಗನೆ ನಿದ್ದೆ ಬರುತ್ತದೆ.
9. ಲ್ಯಾವಂಡರ್ ಎಣ್ಣೆ ಇದರ ಸುವಾಸನೆ ತೆಗೆದುಕೊಂಡರೆ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು. ಇದರ ಎಣ್ಣೆಯಿಂದ ಪಾದಕ್ಕೆ ಮಸಾಜ್ ಮಾಡಿ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ ಮಲಗುವ ರೂಮಿನಲ್ಲಿಡಿ. ಇದರ ಸುವಾಸನೆ ಬೇಗನೆ ನಿದ್ದೆ ಮಾಡಿ, ಬೆಳಗ್ಗೆ ಫ್ರೆಶ್ ಆಗಿ ಎದ್ದೇಳುವಿರಿ.
10. ಗಾರ್ಡೇನಿಯಾ(ಗಾರ್ಡನಿಯಾ) ಇದನ್ನು ಆರ್ಯುವೇದದಲ್ಲಿ ಹೆಚ್ಚಾಗಿ ಬಳಸಲಾಗುವುದು. ಈ ಹೂ ಕೂಡ ಬೇಗನೆ ನಿದ್ದೆ ಬರುವಂತೆ ಮಾಡುವಲ್ಲಿ ತುಂಬಾ ಸಹಕಾರಿ.
ಸಲಹೆ: ನಿದ್ದೆ ಬರಲು ಮಾತ್ರೆ ನುಂಗಿ ಆರೋಗ್ಯ ಹಾಳುಮಾಡಬೇಡಿ, ನೈಸರ್ಗಿಕ ವಿಧಾನ ಪಾಲಿಸಿ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.