ಬೆಂಗಳೂರು : ಗಗನಕ್ಕೆರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅವಗಳ ಮೇಲಿನ ವ್ಯಾಟ್ ಇಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪೆಟ್ರೋಲ್ ಲೀಟರ್ ಬೆಲೆ 81 ರೂ. ಆಗಿದೆ; ಡೀಸೆಲ್ ಬೆಲೆ ಲೀಟರಿಗೆ 71 ಆಗಿದೆ. ಏರುತ್ತಿರುವ ಈ ಬೆಲೆಗಳನ್ನು ಇಳಿಸುವ ದಿಶೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಏನನ್ನೂ ಮಾಡುತ್ತಿಲ್ಲ ಎಂದು ಜನಸಾಮಾನ್ಯರು ಆಕ್ರೋಶವನ್ನು ತೋರ್ಪಡಿಸುತ್ತಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯು ರಾಜ್ಯ ಸರಕಾರದ ಪ್ರಮುಖ ಆದಾಯ ಮೂಲವಾಗಿದ್ದು ಇದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 04-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಜಿಎಸ್ಟಿ ಅಡಿ ಯಲ್ಲಿ ಪೆಟ್ರೋಲ್, ಡೀಸೆಲ್ ತಂದರೂ ಅವುಗಳ ಮೇಲೆ ವ್ಯಾಟ್ ಹೇರುವ ಅಧಿಕಾರ ರಾಜ್ಯ ಸರಕಾರಗಳಿಗೆ ಇರುವುದರಿಂದ ಜನರಿಗಂತೂ ಜಿಎಸ್ಟಿಯಿಂದ ಯಾವುದೇ ಲಾಭವಾಗುವುದಿಲ್ಲ ಎನ್ನಲಾಗುತ್ತಿದೆ.

RELATED ARTICLES  ನಾಗರಾಜ ನಾಯಕರ 'ಬೆಳಕಿನತ್ತ ಜನತೆಯ ಚಿತ್ತ'.

ಡೀಸೆಲ್ ದರ ಹೆಚ್ಚುತ್ತಿರುವದರಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಈ ತನಕ ಪ್ರಯಾಣ ದರ ಹೆಚ್ಚಿಸದಿರುವದೊಂದೇ ಜನಸಾಮಾನ್ಯರಿಗೆ ಸಮಾಧಾನದ ವಿಷಯವಾಗಿದೆ. ಜನರು ಈ ದಿನಗಳಲ್ಲಿ ತಮ್ಮ ಸ್ವಂತ ವಾಹನವನ್ನು ಮನೆಯಲ್ಲೇ ಉಳಿಸಿಕೊಂಡು ಸಮೂಹ ಸಾರಿಗೆಯನ್ನೇ ಹೆಚ್ಚಾಗಿ ಬಳಸುತ್ತಿರುವದು ಕಂಡು ಬರುತ್ತಿದೆ.