ಕುಮಟಾ: “ಸಂಸ್ಕೃತ ಕೆಲವೇ ಕೆಲವು ವ್ಯಕ್ತಿಗಳ, ಅಥವಾ ಯಾವುದೇ ಒಂದು ಜನಾಂಗದ ಅತವಾ ಯಾವುದೋ ಒಂದು ಪ್ರದೇಶದ ಭಾಷೆ ಆಗಿರದೇ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಆಸ್ತಿ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜಿ.ಮುಲ್ಲಾ ನುಡಿದರು.
ಅವರು ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಸ್ಕೃತ ಪರಿಷತ್‍ನ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
“ಸಂಸ್ಕೃತ ಅರಿವಿನಿಂದ ಸಂಸ್ಕಾರದ ವರ್ಗಾವಣೆ ಸಾಧ್ಯ” ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರೇಗುತ್ತಿಯ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿ “ಸಂಸ್ಕೃತದ ಉಳಿವು ಬೆಳವಣಿಗೆಗಾಗಿ ಸಾಮೂಹಿಕವಾಗಿ ಪ್ರಯತ್ನಿಸಬೇಕು” ಎಂದರು.
ಕರ್ನಾಟಕ ಸಂಸತ್ ಪರಿಷತ್ತಿನ ಅಧ್ಯಕ್ಷರಾದ ಸರಕಾರಿ ಪ್ರೌಢಶಾಲೆ ಬರ್ಗಿಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್,ಬರ್ಗಿ ಇವರು ಮಾತನಾಡಿ “ಸಂಸ್ಕøತವು ಹಿರಿದಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದ್ದು ಸಂಸ್ಕಾರವು ಪರಿಸ್ಕ್ರತಗೊಂಡು ವ್ತಕ್ತಿತ್ವವಾಗಿ ಅನಾವರಣಗೊಳ್ಳಲು ಸಂಸ್ಕೃತದ ನಿರಂತರವಾದ ಅಭ್ಯಾಸ ಮತ್ತು ಪ್ರಯೋಗಗಳು ತೀರಾ ಅವಶ್ಯಕವಾಗಿದ್ದು ಸಂಸ್ಕøತ ಪರವಾದ ರಚನಾತ್ಮಕವಾದ ಕಾರ್ಯಚಟುವಟಿಕೆಗಳನ್ನು ವ್ಯಾಪಕವಾಗಿ ಕೈಗೊಳ್ಳಲು ಪರಿಷತ್‍ನ್ನು ಹುಟ್ಟುಹಾಕಲಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕøತ ಪ್ರಾಧ್ಯಾಪಕಿ ಡಾ.ಪ್ರೀತಿ ಭಂಡಾರಕರ್‍ರವರು ಮಾತನಾಡಿ “ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಿಂದಲೇ ಸಂಸ್ಕೃತ ಕಲಿಕೆ ಸಾಧ್ಯವಾದಲ್ಲಿ ಎಲ್ಲಾ ವಿಷಯಗಳಲ್ಲಿ ಪ್ರಭುತ್ವ ಹೊಂದಲು ಸಾಧ್ಯ” ಎಂದರು.
ಕುಮಟಾ ತಾಲೂಕ ಸಂಸ್ಕøತ ಅಧ್ಯಾಪಕರ ಸಂಘದ ಅಧ್ಯಕ್ಷೆ ರಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಸಂಸ್ಕøತ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಗಣೇಶ ಭಟ್ ಪ್ರ್ರಾಸ್ತಾವಿಕವಾಗಿ ನುಡಿದರು.ಮುಖ್ಯಾಧ್ಯಾಪಕ ರೋಹಿದಾಸ್ ಗಾಂವಕರ ಸ್ವಾಗತಿಸಿದರು.
ವಿನಯಾ ಗೌಡ ವಂದಿಸಿದರು. ವೆಂಕಟೇಶ ಪಟಗಾರ ನಿರೂಪಿಸಿದರು.
ಡಾ. ವಿನಾಯಕ ಹೆಗಡೆ ಮತ್ತು ಪ್ರೋ.ಉಮೇಶ ನಾಯಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜಿ.ಮುಲ್ಲಾರವರನ್ನು ಸನ್ಮಾನಿಸಲಾಯಿತು.ಶಿಕ್ಷಕ ಎನ್.ರಾಮು ಹಾಗೂ ಗೋಪಾಲ್ ಗುನಗಾರವರನ್ನು ಅಭಿನಂದಿಸಲಾಯಿತು. ಉಮೇಶ ಭಟ, ಭಾಸ್ಕರ್ ಭಟ್, ಗೀತಾ ಭಟ್, ಪರಮೇಶ್ವರ ಹೆಗಡೆ, ಸರಿತಾ ನಾಯ್ಕ, ಪದ್ಮಾವತಿ ಗಾಯಕವಾಡ, ರಾಜು ನಾಯ್ಕ, ನಾಗರಾಜ ಭಟ್ ವಿಶ್ವನಾಥ ಬೇವಿನಕಟ್ಟಿ, ಜಾನಕಿ ಗೊಂಡ, ಶಿಲ್ಪಾ ನಾಯಕ, ಬಾಲಚಂದ್ರ ಹೆಗಡೇಕರ್,ಮಹಾದೇವ ಗೌಡ, ನಾಗರಾಜ ನಾಯಕ, ಇಂದಿರಾ ನಾಯಕ, ಸೌಜನ್ಯ ಬಂಟ್, ಕವಿತಾ ಅಂಬಿಗ ಹಾಗೂ ಬಿ.ಎಡ್ ಪ್ರಶಿಕ್ಷಣಾರ್ಥಿಗಳಾದ ಶಶಿಕುಮಾರ ಹರಿಕಂತ್ರ , ನಾಗಶ್ರೀ ಪಟಗಾರ, ಪೂರ್ಣಿಮಾ ಪಟಗಾರ, ಪೂರ್ಣಿಮಾ ಗುನಗಾ, ಐಶ್ವರ್ಯ ನಾಯಕ, ದೀಪಾ ನಾಯ್ಕ ಉಪಸ್ಥಿತರಿದ್ದರು.
ವರದಿ:ಎನ್.ರಾಮು.ಹಿರೇಗುತ್ತಿ