ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಮನಾಥ ಪ್ರೌಢಶಾಲೆ, ಊರಕೇರಿಯಲ್ಲಿ ನಡೆದ ಈ ವರ್ಷದ ವಲಯ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಈ ಕೆಳಗಿನ ಸಾಧನೆಗಳನ್ನು ಮಾಡಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನೃತ್ಯ ಕಲೋತ್ಸವದಲ್ಲಿ ಖುಷಿ, ಚಿನ್ಮಯಿ ಹಾಗೂ ಸಂಗಡಿಗರು ಪ್ರಥಮ, ಭಾಷಣ ಸ್ಪರ್ಧೆ ಇಂಗ್ಲೀಷ್‍ನಲ್ಲಿ ಸಮೀಕ್ಷಾ ವಿ.ಎನ್ ಪ್ರಥಮ, ಕನ್ನಡದಲ್ಲಿ ಚಿನ್ಮಯಿ ಭಂಡಾರಿ ಪ್ರಥಮ, ತುಳುವಿನಲ್ಲಿ ತೇಜಸ್ವಿನಿ ಕೆ. ಶಾನಭಾಗ ಪ್ರಥಮ, ಮರಾಠಿಯಲ್ಲಿ ವಸುಧಾ ಆರ್. ಪ್ರಭು ಪ್ರಥಮ, ಹಿಂದಿಯಲ್ಲಿ ವೈಷ್ಣವಿ ಗುಡಿಗಾರ ದ್ವಿತೀಯ, ಕೊಂಕಣಿಯಲ್ಲಿ ಸುದಿತಿ ಜಿ. ಕಾಮತ ದ್ವಿತೀಯ, ಸಂಸ್ಕøತದಲ್ಲಿ ನೇಹಾ ವಿ. ಶಾನಭಾಗ ದ್ವಿತೀಯ, ತೆಲುಗಿನಲ್ಲಿ ಎಚ್. ಅಭಿಷೇಕ ತೃತೀಯ, ಆಶುಭಾಷಣದಲ್ಲಿ ಕಾರ್ತಿಕ ಪಿ. ನಾಯ್ಕ ಪ್ರಥಮ, ಮಿಮಿಕ್ರಿಯಲ್ಲಿ ಕೌಶಿಕ ಎಂ. ನಾಯಕ ಪ್ರಥಮ, ಧಾರ್ಮಿಕ ಪಠಣದಲ್ಲಿ ಶ್ರೇಯಾ ವಿ. ಶಾನಭಾಗ ಪ್ರಥಮ, ಭಾವಗೀತೆ ಹಾಗೂ ಗಝಲ್‍ನಲ್ಲಿ ತೇಜಸ್ವಿನಿ ಕೆ. ಶಾನಭಾಗ ಪ್ರಥಮ, ಛದ್ಮವೇಷದಲ್ಲಿ ಖುಷಿ ನಾಯ್ಕ ಪ್ರಥಮ, ಭರತನಾಟ್ಯದಲ್ಲಿ ಕಾವ್ಯಾ ವಿ. ಹೆಗಡೆಕಟ್ಟೆ ದ್ವಿತೀಯ, ರಂಗೋಲಿಯಲ್ಲಿ ಶಿಲ್ಪಾ ಜಿ. ಪಟಗಾರ ಪ್ರಥಮ, ಜಾನಪದಗೀತೆಯಲ್ಲಿ ವಸುಧಾ ಆರ್. ಪ್ರಭು ದ್ವಿತೀಯ, ಕಲೋತ್ಸವದ ಜನಪದಗೀತೆಯಲ್ಲಿ ಕೆ.ಎಸ್.ಸಿಂಚನಾ ಸಂಗಡಿಗರು ದ್ವಿತೀಯ, ದೃಶ್ಯ ಕಲೋತ್ಸವದಲ್ಲಿ ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ.
ಕೊಂಕಣದ ಈ ಶಾಲೆಯು ವಲಯ ಮಟ್ಟದಲ್ಲಿ ಅತೀ ಹೆಚ್ಚು ಪ್ರಶಸ್ತಿಯನ್ನು ಗಳಿಸಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು, ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

RELATED ARTICLES  ಶಾಲೆಗೆ ಹೊರಟ ವಿದ್ಯಾರ್ಥಿನಿ ಅಪಹರಿಸಿ ಮದುವೆಯಾದವನಿಗೆ : ಕಠಿಣ ಶಿಕ್ಷೆ ವಿಧಿಸಿದ ಕೋರ್ಟ.