ಶಿರಸಿ: ನಗರಸಭೆ ಚುನಾವಣೆ ಸಂಪನ್ನವಾಗಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾರರ ಮನ ಯಾರೆಡೆಗೆ ಎಂದು ನೋಡಲು ಇನ್ನೆರಡು ದಿನ ಕಾಯಬೇಕು. ಅದೆಲ್ಲ ಇರಲಿ, ಚುನಾವಣಾ ಪ್ರಚಾರದಲ್ಲಿ ಬಿರುಸಿನಿಂದ ಕಾಣಿಸಿಕೊಂಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತದಾನವನ್ನೇ ಮಾಡಿಲ್ಲ ಎಂದು ವರದಿಯಾಗಿದೆ.
ನಿನ್ನೆ ಬೆಳಿಗ್ಗೆಯಿಂದ ಸಂಜೆಯತನಕ ಮತದಾನ ನಡೆದಿದ್ದು, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವೋಟ್ ಮಾಡಿಲ್ಲ ಎನ್ನಲಾಗಿದೆ.
ಮತದಾನದ ಕುರಿತಾಗಿ ಚುನಾವಣಾ ಆಯೋಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮತದಾನದ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಅದೆಷ್ಟೋ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ಅವೆಲ್ಲವನ್ನೂ ತಿಳಿದಿರುವ ಹಾಗೂ ಮತದ ಮಹತ್ವ ಗೊತ್ತಿರುವ ಸಚಿವರೊಬ್ಬರು ಮತದಾನ ಮಾಡಿಲ್ಲ ಎಂಬುದು ಈಗ ಚರ್ಚಿತಚಾಗುತ್ತಿರುವ ವಿಷಯ.
ಕೇಂದ್ರ ಸಚಿವರೊಬ್ಬರು ಮತಾದಾನ ಮಾಡದೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂಬುದು ಜನತೆಗೆ ವಿಪರ್ಯಾಸವಾದಂತೆ ಕಾಣುತ್ತಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಹೈದ್ರಾಬಾದ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನೆಪವೊಡ್ಡಿ ಮತಚಲಾಯಿಸಲು ಬಂದಿಲ್ಲ ಎನ್ನಲಾಗಿದೆ.
ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದ ಸಚಿವರೇ ಇಂದು ಮತದಾನ ಮಾಡದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಎಲ್ಲವನ್ನೂ ತಿಳಿದು ಈ ರೀತಿಯಾಗಿ ನಡೆದುಕೊಂಡಿರುವ ಕೇಂದ್ರ ಸಚಿವರ ಪರಿಯೇ ಅರ್ಥವಾಗುತ್ತಿಲ್ಲ ಎಂಬುದು ಕೆಲವರ ಮಾತಾದರೆ. ಚುನಾವಣೆಗೆ ಮತದಾನ ಮಾಡಲು ಎಂತಹುದೇ ಸಂದರ್ಭದಲ್ಲಿಯೂ ಹಾಜರಾಗಬಹುದಿತ್ತು ಈ ನಡೆ ಸರಿಯಲ್ಲ ಎಂಬ ಬಗ್ಗೆಯೂ ಮಾತುಗಳು ಕೇಳುತ್ತಿದೆ.