ಕುಮಟಾ: 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ನಿಜ ಶರಣನೆಂದೇ ಅಂಬಿಗರ ಚೌಡಯ್ಯನವರು ಪ್ರಜ್ವಲದ್ರವತಾರೆಯಾಗಿ ಬೆಳಗಿದ್ದಾರೆ. ಅತ್ಯಂತ ನಿರ್ಭಿಡತೆಯ ಸಮಾಜ ಸುಧಾರಕರು, ಸಮ ಸಮಾಜ ಕಟ್ಟಲು ಹೋರಾಡಿದ ಆ ವಿಚಾರ ಕ್ರಾಂತಿಯ ಕೆಂಡ ದುಂಡೆದ್ದಾದದನ್ನ ಪೂಜ್ಯರ ವಚನದಲ್ಲಿ ಕಾಣಬಹುದು. ಈ ಮಹಾನುಭವರ ಶರಣ ಸಂದೇಶ ನಾಡಿನಾದ್ಯಂತ ಬೆಳಕಿಗೆ ಬರಬೇಕಾದ ಅನಿವಾರ್ಯತೆ ಇದೆ. ಹಾವೇರಿ ಜಿಲ್ಲೆಯ ಚೌಡಯ್ಯ ದಾನಪುರವೇ ಅಂಬಿಗರ ಚೌಡಯ್ಯರವರ ಜನ್ಮ ಭೂಮಿ ಎಂದು ಪೂಜಿಸಲ್ಪಡುತ್ತಿದೆ. ಇಂದು ಈ ಧರ್ಮಕ್ಷೇತ್ರ ಗುರುಪೀಠವಾಗಿ ದಾಸೋಹ ಹಾಗೂ ವಿದ್ಯಾ ಕೇಂದ್ರವಾಗಿದೆ.
ಭಾರತದ ಭವ್ಯ ಧಾರ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಯು ವಿಶ್ವದರ್ಜೆಗೇರಲು ಧರ್ಮಸತ್ತೆಗೆ ಮುನ್ನಡಿಯಂತಿರುವ ಭಗವದ್ಗೀತೆಯನ್ನು ಮಹಾಭಾರತದಂತಹ ವಿಶ್ವ ಆಚಾರ್ಯ ಕೃತಿ ನೀಡಿದ ಜ್ಞಾನ ನಿಧಿಯಾದ ವೇದಗಳಿಗೆ ಸ್ವರೂಪ ನೀಡಿದ ವಿಶ್ವ ವಂದ್ಯ ವೇದವ್ಯಾಸ, ಭಿಷ್ಮಮಹರ್ಷಿಗಳು, ಶ್ರೀರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ, ವಶಿಷ್ಟ, ಅಗಸ್ತ್ಯ ಮಹರ್ಷಿಗಳು, ಧರ್ಮರಾಯ ಮತ್ತು ಕರ್ಣನಂತ ಮೇರು ಆಚಾರ್ಯ ಪುರುಷರು ಹಾಗೂ ನಿರ್ಭಿಡಿತಯ ಮಾನವನ ವೈಚಾರಿಕ ಪ್ರಜ್ಞೆಯ ಮೇರು ಪರ್ವತವಾಗಿರುವ ಗೌತಮ ಬುದ್ಧ, ಶಿರಡಿ ಸಾಯಿಬಾಬ, ಮಾತಾ ಮಾಣಿಕೇಶ್ವರಿ ತ್ರಿಕಾಲ ಜ್ಞಾನಿ ಸಂತ ಶರಣ ಮಹಾರಾಜ ಸಂತ ಕಬೀರ ದಾಸರು ಹೀಗೆ ಹತ್ತು ಹಲವಾರು ಮಹಾನುಭಾವರಿಗೆ ಈ ಸಮಾಜವು ಜನ್ಮ ನೀಡಿದೆ ಎಂಬುದು ಹೆಮ್ಮೆ. ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಅಗ್ರಪಂಕ್ತಿ ಗಿಟ್ಟಿಸಿಕೊಂಡ ಮಹಾಭಾರತವು ಈ ಕುಲದ ಕಥೆಯಾಗಿದೆ ಎಂಬುದು ಇನ್ನೊಂದು ಹೆಮ್ಮ.
ಇಂದು ಅಂಬಿಗರ ಚೌಡಯ್ಯನವರ ಕುಲವು ಎಲ್ಲಾ ರಂಗಗಳಲ್ಲಿ ಮುಂದೆ ಬರಲು ಅಂಬಿಗರ ಚೌಡಯ್ಯನವರ ವಿಚಾರ ಧಾರೆಯಿಂದ ಮಾತ್ರ ಸಾಧ್ಯ ಎಂಬುದು ಸರ್ವಕಾಲಿಕ ಸತ್ಯ. ಅದಕ್ಕಾಗಿ ನಿಜಶರಣ ಅಂಬಿಗ ಚೌಡಯ್ಯನವರ ವಿಚಾರವನ್ನು ಸಮಾಜ ಬಾಂಧವರಿಗೆ ತಿಳಿಸುವ ಕುರಿತು ಒಂದು ತಿಂಗಳ ಪರ್ಯಂತ ಈಡೀ ರಾಜ್ಯದಲ್ಲಿ “ಧರ್ಮಜಾಗೃತಿ ಜ್ಯೋತಿ ಯಾತ್ರೆಯ” ಹಲವಾರು ಮುಖ್ಯ ಉದ್ದೇಶಗಳ ಮೂಲಕ ಜಗದ್ಗುರು ಪೂಜ್ಯಶ್ರೀ ಶಾಂತಾಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಯಾತ್ರೆ ಹಮ್ಮಿಕೊಂಡಿರುತ್ತಾರೆ.
ದಿನಾಂಕ: 08/09/2018 ಶನಿವಾರ ಉತ್ತರ ಕನ್ನಡ ಜಿಲ್ಲೆಗೆ ಧರ್ಮ ಜಾಗೃತಿ ಜ್ಯೋತಿ ಯಾತ್ರೆ ಆಗಮಿಸಲಿದೆ. ಯಾತ್ರೆ ಮೂಲಕ ಆಗಮಿಸುವ ಪೂಜ್ಯ ಗುರುಗಳನ್ನು ಸ್ವಾಗತಿಸಿ ಬಿಳ್ಕೋಡುವ ಕಾರ್ಯಕ್ರಮದ ಕುರಿತು ಸಮಸ್ತ ಮೀನುಗಾರ ಕುಲಬಾಂಧವರ ಅಭಿಪ್ರಾಯ ಸಲಹೆ ಸೂಚನೆಗಾಗಿ ದಿನಾಂಕ: 04/09/2018 ಮಂಗಳವಾರ ಮಧ್ಯಾಹ್ನ 4:00 ಗಂಟೆಗೆ ಕುಮಟಾದ ರೈಲ್ ಹೊಟೇಲ್‍ನಲ್ಲಿ ಚಿಂತನಾ ಸಭೆ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ಮೀನುಗಾರ ಕುಲಬಾಂಧವರಾದ ಧಾರ್ಮಿಕ ಚಿಂತನೆಯ, ಸಮಾಜ ಅಭಿವೃದ್ಧಿಯ ಪ್ರಮುಖರು ಹಾಜರಿರಬೇಕಾಗಿ ಪತ್ರಿಕಾ ಪ್ರಕಟಣೆ ಮೂಲಕ ಸದಾನಂದ ಜೆ. ಹರಿಕಂತ್ರ ವಿನಂತಿಸಿಕೊಂಡಿದ್ದಾರೆ.