ಹೂನ್ನಾವರ: ತಾಲೂಕಿನ ಮಂಕಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜನತಾ ವಿದ್ಯಾಲಯದ ಪ್ರೌಢಶಾಲೆಯ ವಿದ್ಯಾರ್ಥಿಗಳು { ಸೂರಜ ಎಂ.ನಾಯ್ಕ(100,800 ಮೀಟರ್ ಓಟ),ಯೋಗೆಶ ಎಂ.ಗಾಡ(ತ್ರೀವಿಧ ಜಿಗಿತ),ಪೂರ್ಣಿಮಾ ವಿ.ಶಾನಭಾಗ(ಚಕ್ರ ಎಸೆತ),ಗಂಗಾಧರ ಎಸ್.ಗೌಡ(ಎತ್ತರ ಜಿಗಿತ),ಸುಷ್ಮಾ ಎಂ.ಗೌಡ(ತ್ರೀವಿಧ ಜಿಗಿತ),ರಕ್ಷೀತಾ ಎಂ ಗೌಡ(ಯೋಗ,ಟಿ.ಜಿ.ಟಿ),ನತೀಶ ಜೆ.ಗೌಡ(ಎತ್ತರ ಜಿಗಿತ),ಮನೋಜ ಕೆ.ಗೌಡ(600ಮೀಟರ ಓಟ),ರಂಜನಾ ಎಂ ಗೌಡ(ಉದ್ದ ಜಿಗಿತ),ಸ್ಟೇನಿ ಎಸ್.ಪಿಂಟೊ(ನಡಿಗೆ),ಪಲ್ಲವಿ ಸಿ.ಗೌಡ(ತ್ರೀವಿಧ ಜಿಗಿತ),ಕನ್ನಾ ಟಿ.ಉಪ್ಪಾರ(ಗುಂಡು ಎಸೆತ) ಹೀಗೆ ಶಾಲೆಯ ವಿದ್ಯಾರ್ಥಿಗಳು ಕಬಡ್ಡಿ,ರೀಲೆ ಯಂತಹ ಗುಂಪು ಆಟದಲ್ಲಿ ಪ್ರಥಮ ಸ್ಥಾನ, ಚಸ್ ಆಟಗಳಲ್ಲಿ ಐದನೇ ಸ್ಥಾನ ಪಡೆದಿರುತ್ತಾರೆ.
ದೈಹಿಕ ಶಿಕ್ಷಕರಾದ ಶಿವಣ್ಣ ಸವದಿ,ಶಿಕ್ಷಕರಾದ ಗಣೇಶ ಎಸ್.ಭಟ್, ಸಹ ಶಿಕ್ಷಕಿ ಶ್ರೀಮತಿ ಸಬೀತಾ ನರೋನ್ಹಾರ ಮಾರ್ಗದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆಲ್ಲ ಮುಖ್ಯ ಶಿಕ್ಷಕರಾದ ಫಿಲೋಮಿನಾ ರೋಡ್ರಿಗಿಸ್,ಶಾಲಾ ಸಿಬ್ಬಂದಿ ವರ್ಗ, ಕೆನರಾ ವೆಲ್ಫೆರ್ ಟ್ರಸ್ಟ್ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಶುಭ ಹಾರೈಸಿದ್ದಾರೆ.