ಹೊನ್ನಾವರ :ಇತ್ತೀಚಿಗೆ ಸಮೂಹ ಸಂಪನ್ಮೂಲ ಕೇಂದ್ರ ಉಪ್ಪೋಣಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆಯ ವಿದ್ಯಾರ್ಥಿಗಳು ಒಟ್ಟು 18 ಬಹುಮಾನಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

ಕಿರಿಯರ ವಿಭಾಗದಲ್ಲಿ ಕುಮಾರಿ ಪ್ರತೀಕಾ ಗಣಪತಿ ನಾಯ್ಕ ಕಥೆ ಹೇಳುವುದು, ಕುಮಾರಿ ಪ್ರಿಯಾಂಕಾ ಲೋಕೇಶ ಮರಾಠಿ ಕೊಂಕಣಿ ಕಂಠಪಾಠ, ಕುಮಾರಿ ಶ್ವೇತಾ ಸಂಗಡಿಗರು ಜಾನಪದ ನೃತ್ಯ, ಕುಮಾರ ಗೌರವ್ ಸಂಗಡಿಗರು ದೇಶಭಕ್ತಿ ಗೀತೆ, ಮತ್ತು ಕುಮಾರ ಚಿದಾನಂದ ಸಂಗಡಿಗರು ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಹೊನ್ನಾವರ ತಾಲೂಕಾ ಮಟ್ಟದ ಪ್ರತಿಭಾಕಾರಂಜಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿಯಲ್ಲಿ ಕುಮಾರ ಧನಂಜಯ ಗಣಪತಿ ಗೌಡ ಮಣ್ಣಿನ ಮಾದರಿ, ಕುಮಾರ ಮಿಥುನ್ ಕೇಶವ ಮರಾಠಿ ಛದ್ಮವೇಷ ಮತ್ತು ತುಳು ಕಂಠಪಾಠ, ಕುಮಾರ ಚಿದಾನಂದ ಭುವನೇಶ್ವರ ನಾಯ್ಕ ಸಂಸ್ಕøತ ಧಾರ್ಮಿಕ ಪಠಣ ಮತ್ತು ಆಶು ಭಾಷಣ, ಕುಮಾರ ಸಂಜಯ ಈಶ್ವ್ವರ ಗೌಡ ಚಿತ್ರಕಲೆ, ಕುಮಾರಿ ಪ್ರಿಯಾಂಕಾ ಲೋಕೇಶ ಮರಾಠಿ ಕನ್ನಡ ಕಂಠಪಾಠ, ಕುಮಾರಿ ಲಲಿನಿ ಸಂಗಡಿಗರು ಕೋಲಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿದ್ದಾರೆ.

RELATED ARTICLES  ಹೋರಾಟದ ಮೂಲಕ ಹೆಸರಾದ ನಾರಾಯಣ ಶಿರೂರು ನಿಧನ.

ಕುಮಾರ ಚಿದಾನಂದ ಭುವನೇಶ್ವರ ನಾಯ್ಕ ಇಂಗ್ಲಿಷ್ ಕಂಠಪಾಠ ಮತ್ತು ಕುಮಾರಿ ಪ್ರಿಯಾಂಕಾ ಲೋಕೇಶÀ ಮರಾಠಿ ಲಘು ಸಂಗೀತ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಹಿರಿಯರ ವಿಭಾಗದಲ್ಲಿ ಕುಮಾರ ರೋಹನ ಗಣೇಶ ನಾಯ್ಕ ಛದ್ಮವೇಷದಲ್ಲಿ ದ್ವಿತೀಯ ಮತ್ತು ಆಶುಭಾಷಣದಲ್ಲಿ ತೃತೀಯ, ಕುಮಾರ ಅರುಣ ಲಕ್ಷ್ಮಣ ಮರಾಠಿ ಮಣ್ಣಿನ ಮಾದರಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕರಾದ ಶ್ರೀ ಸುಬ್ರಾಯ ಶಾನಭಾಗ, ಅತಿಥಿ ಶಿಕ್ಷಕಿಯಾದ ಶ್ರೀಮತಿ ಮಮತಾ ನಾಯ್ಕ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಗಣಪತಿ ಗೌಡ ಹಾಗೂ ಎಸ್.ಡಿ.ಎಮ್.ಸಿ. ಸದಸ್ಯರು ಮತ್ತು ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  'ಇಸ್ಲಾಂ, ಜಗತ್ತಿಗೆ ಒಂದು ಬಾಂಬ್' ಪ್ರಕರಣ; ಸಂಸದ ಅನಂತಕುಮಾರ್ ಅವರಿಗೆ ಬಿಗ್ ರಿಲೀಫ್